ಮೈಸೂರು: ಮೈಸೂರಿನಲ್ಲಿ ಚಾಕುವಿನಿಂದ ಇರಿದು ರೌಡಿಶೀಟರ್ ಶ್ರೀಗಂಧ ನನ್ನು ಹತ್ಯೆ ಮಾಡಲಾಗಿದೆ. ಕುಡಿದ ಮತ್ತಿನಲ್ಲಿ ರವಿ ಮತ್ತು ರೌಡಿಶೀಟರ್ ಶ್ರೀಗಂಧ ನಡುವೆ ಗಲಾಟೆ ನಡೆದಿದೆ.
ಈ ವೇಳೆ ಚಾಕುವಿನಿಂದ ಇರಿದು ಶ್ರೀಗಂಧನನ್ನು ರವಿ ಕೊಲೆ ಮಾಡಿರುವ ಆರೋಪ ಕೇಳಿ ಬಂದಿದೆ. ಮೈಸೂರಿನ ಚಾಮರಾಜ ಜೋಡಿ ರಸ್ತೆಯಲ್ಲಿ ಘಟನೆ ನಡೆದಿದೆ. ಕೊಲೆಯಾದ ರೌಡಿಶೀಟರ್ ಮೈಸೂರಿನ ಕಾಕರವಾಡಿ ನಿವಾಸಿಯಾಗಿದ್ದಾನೆ. ಮೈಸೂರಿನ ಕೆಆರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.