ಬಿಜೆಪಿ ಸಂಸದೆ ಸಾಧ್ವಿ ಪ್ರಜ್ಞಾ ಠಾಕೂರ್ ಅವರ ‘ನಿಮ್ಮ ಮನೆಯಲ್ಲಿ ಚಾಕುಗಳನ್ನು ಇಟ್ಟುಕೊಳ್ಳಿ’ ಎಂಬ ಕಾಂಗ್ರೆಸ್ ಟೀಕೆಗೆ ತಿರುಗೇಟು ನೀಡಿರುವ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಕಾಂಗ್ರೆಸ್ ನಾಯಕ ಮತ್ತು ರಾಜ್ಯಸಭಾ ಸಂಸದ ಇಮ್ರಾನ್ ಪ್ರತಾಪಗಡಿ ಅವರ ಹಳೆಯ ವೀಡಿಯೊವನ್ನು ಟ್ವೀಟ್ ಮಾಡಿದ್ದಾರೆ.
‘ಮಾಡು ಇಲ್ಲವೇ ಮಡಿ ಪರಿಸ್ಥಿತಿ ಬಂದರೆ ಕನಿಷ್ಠ 3-4 ಜನರನ್ನಾದರೂ ಸಾಯಿಸಿ’ ಎಂದು ಹಳೆ ವಿಡಿಯೋ ಇದಾಗಿದೆ. ಶರ್ಮಾ ಟ್ವೀಟ್ ಮಾಡಿ, “ಇವರು ಕಾಂಗ್ರೆಸ್ ರಾಜ್ಯಸಭಾ ಸಂಸದ ಇಮ್ರಾನ್ ಪ್ರತಾಪಗಡಿ. ತುಷ್ಟೀಕರಣದ ರಾಜಕೀಯದಿಂದಾಗಿ ಕಾಂಗ್ರೆಸ್ ಅಪ್ರಸ್ತುತವಾಗಿದೆ” ಎಂದು ಟ್ವೀಟ್ ಮಾಡಿದ್ದಾರೆ.
ಈ ಹಿಂದೆ ಪ್ರಜ್ಞಾ ಠಾಕೂರ್ ಅವರು ಹಿಂದೂಗಳು ಚಾಕುಗಳನ್ನು ಸಿದ್ಧವಾಗಿಟ್ಟುಕೊಳ್ಳಿ ಎಂದು ಹೇಳಿಕೆ ನೀಡಿದ್ದರು. ತಮ್ಮ ಮೇಲೆ ಹಲ್ಲೆ ಮಾಡುವವರಿಗೆ ಮತ್ತು ಅವರ ಘನತೆಗೆ ಪ್ರತಿಕ್ರಿಯಿಸುವ ಹಕ್ಕು ಹಿಂದೂಗಳಿಗೆ ಇದೆ ಎಂದು ಹೇಳಿದ್ದರು. ಅದಕ್ಕೆ ಕಾಂಗ್ರೆಸ್ ಟೀಕೆ ಮಾಡುತ್ತಿದೆ. ಅದಕ್ಕೆ ಈಗ ಈ ರೀತಿಯಾಗಿ ಶರ್ಮಾ ಚುಚ್ಚಿದ್ದಾರೆ.
https://twitter.com/i/web/status/1607771278156627969