
ಬೆಂಗಳೂರು: ಕಿದ್ವಾಯಿ ಆಸ್ಪತ್ರೆ ನಿರ್ದೇಶಕ ಸ್ಥಾನದಿಂದ ಡಾ.ವಿ.ಲೋಕೋಶ್ ಅವರನ್ನು ಎತ್ತಂಗಡಿ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಕಿದ್ವಾಯಿ ನಿರ್ದೇಶಕರ ವಿರುದ್ಧ ಹಲವು ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ನಿರ್ದೇಶಕ ಡಾ.ಲೋಕೇಶ್ ಅವರನ್ನು ಕೆಳಗಿಳಿಸಿರುವ ರಾಜ್ಯ ಸರ್ಕಾರ, ಲೋಕೇಶ್ ಸ್ಥಾನಕ್ಕೆ ಡಾ.ಸೈಯದ್ ಅಲ್ತಾಫ್ ಅವರನ್ನು ನೇಮಕ ಮಾಡಿದೆ.
ಔಷಧ ಟೆಂಡರ್ ವಿಚಾರದಲ್ಲಿ ಅನೇಕ ಲೋಪದೋಷ, ಆಸ್ಪತ್ರೆಯಲ್ಲಿ ಕಳಪೆ ಚಿಕಿತ್ಸೆ, ಸಾಲು ಸಾಲು ಹಗರಣಗಳ ಬಗ್ಗೆ ದೂರು ಬಂದಿತ್ತು. ಈ ಹಿನ್ನೆಲೆಯಲ್ಲಿ ಕಿದ್ವಾಯಿ ನಿರ್ದೇಶಕ ಡಾ.ಲೋಕೇಶ್ ಅವರನ್ನು ಕೆಳಗಿಳಿಸಿ ನೂತನ ನಿರ್ದೇಶಕರನ್ನಾಗಿ ಡಾ.ಸೈಯದ್ ಅಲ್ತಾಫ್ ಅವರನ್ನು ನೇಮಕ ಮಾಡಲಾಗಿದೆ.