ಪುಟಾಣಿ ಬಾಲೆಯರಿಗೆ ತಮ್ಮ ಮೆಚ್ಚಿನ ಮಿಸ್ ಥರ ಆಗಬೇಕು ಎನಿಸಿ, ’ಮಿಸ್ ಆಟ’ ಆಡೋ ಮಕ್ಕಳನ್ನು ಬಹುಶಃ ನಾವೆಲ್ಲಾ ನೋಡಿಕೊಂಡೇ ಬೆಳೆದಿದ್ದೇವೆ.
ಪ್ರೀಸ್ಕೂಲ್ ಒಂದರಲ್ಲಿ ಪುಟ್ಟ ಮಗುವೊಂದು ತನ್ನ ಸಹಪಾಠಿಗಳಿಗೆ ಸ್ಪ್ಯಾನಿಶ್ ಹೇಳಿಕೊಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ತನ್ನ ಸಹಪಾಠಿಗೆ ಬೋರ್ಡ್ ತೋರಿಸುತ್ತಾ ಸ್ಪ್ಯಾನಿಶ್‌ನಲ್ಲಿ ಲೆಕ್ಕಾಚಾರ ಹಾಕುವುದನ್ನು ಬಲು ಮುದ್ದಾಗಿ ಹೇಳಿಕೊಡುತ್ತಿದ್ದಾನೆ ಈ ಬಾಲಕ.
“ಹೊಸ ಭಾಷೆ ಕಲಿಯಲು ಬಹಳ ಬೇಗ ಎಂದು ಯಾವ ವಯಸ್ಸಲ್ಲೂ ಅನಿಸುವುದಿಲ್ಲ. ಅರಿಜ಼ೋನಾದ ಮಾರ್ಕೋ ಡ ನಿಜ಼ಾ ಪ್ರೀಸ್ಕೂಲ್‌ನ ಈ ಬಾಲಕ ತನ್ನ ಸಹಪಾಠಿಗೆ ಸ್ಪ್ಯಾನಿಶ್‌ನಲ್ಲಿ ಅಂಕಿಗಳನ್ನು ಹೇಳಿಕೊಡುತ್ತಿರುವುದನ್ನು ವಿಡಿಯೋದಲ್ಲಿ ಸೆರೆ ಹಿಡಿಯಲಾಗಿದೆ,” ಎಂದು ’ನೌ ದಿಸ್’ ಹೆಸರಿನ ಟ್ವಿಟ್ಟರ್ ಹ್ಯಾಂಡಲ್ ಶೇರ್ ಮಾಡಿಕೊಂಡಿದೆ.