alex Certify ಮಗು ನೀಡಿದ ಐಡಿಯಾ ಮೆಚ್ಚಿಕೊಂಡ ಗೇಮಿಂಗ್‌ ಕಂಪನಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಗು ನೀಡಿದ ಐಡಿಯಾ ಮೆಚ್ಚಿಕೊಂಡ ಗೇಮಿಂಗ್‌ ಕಂಪನಿ

’ಪುರುಷ’ ಅಥವಾ ’ಸ್ತ್ರೀ’ ಎಂದು ನಮ್ಮನ್ನು ಗುರುತಿಸಿಕೊಳ್ಳುವ ಕಾಲ ಗತಿಸಿ ಇದೀಗ ಎರಡೂ ಲಿಂಗಗಳನ್ನು ಮೀರಿ ಜನರು ತಮ್ಮನ್ನು ತಾವು ಗುರುತಿಸಿಕೊಳ್ಳುವ ಕಾಲಘಟ್ಟ ಬಂದಿದೆ.

ಇದೀಗ ಎಲ್ಲೆಲ್ಲೂ ಪಾಪ್ ಸಂಸ್ಕೃತಿ ನೆಲೆಸಿದೆ. ಮೂವಿಗಳಿಂದ ಟಿವಿ ಶೋಗಳವರೆಗೂ, ’ಆತ’, ’ಆಕೆ’ ಬದಲಿಗೆ ಸರ್ವನಾಮಗಳ ಮೂಲಕ ಪಾತ್ರಗಳನ್ನು ಪರಿಚಯಿಸಲಾಗುತ್ತಿದೆ.

ಇದಕ್ಕೆ ಯಾವ ಮಟ್ಟದಲ್ಲಿ ಬೇಡಿಕೆ ಹೆಚ್ಚಾಗುತ್ತಿದೆ ಎಂಬುದನ್ನು ತೋರಲು, ಟ್ವಿಟ್ಟಿಗರೊಬ್ಬರು ತಮ್ಮ ಮಗು ಬರೆದ ಪತ್ರವೊಂದನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಅವರು ’ನಿಂಟೆಂಡೋ’ ಹಾಡಿಗೆ ಸರಳವಾದ ಮನವಿಯೊಂದನ್ನು ಮಾಡಿದ್ದು, ಇದು ಪೋಕಿಮೊನ್ ರೀತಿಯ ಕಾರ್ಟೂನ್ ಆಗಿದೆ.

ಬಸ್, ಹೋಟೆಲ್, ಚಿತ್ರೀಕರಣ ಪುನಾರಂಭ: ಮಾಲ್, ಈಜುಕೊಳ, ಸಿನಿಮಾ ಮಂದಿರಕ್ಕೆ ನಿರ್ಬಂಧ; ಇಲ್ಲಿದೆ ಮಾಹಿತಿ

ಈ ಪತ್ರದ ಮೂಲಕ ಮಗುವು ’ಬೈನರಿಯಲ್ಲದ’ ಪೋಕಿಮೊನ್ ವೆರೈಟಿಗಳು ಬೇಕು ಎಂದು ಬರೆದಿದೆ. ಮಗುವಿನ ಈ ಐಡಿಯಾ ಮೆಚ್ಚಿಕೊಂಡಿರುವ ಗೇಮಿಂಗ್ ಕಂಪನಿ ’ಇದು ಅದ್ಭುತ ಐಡಿಯಾ’ ಎಂದು ಪ್ರತಿಕ್ರಿಯೆ ಕೊಟ್ಟಿದೆ. ಪತ್ರಿಕ್ರಿಯೆಯೊಂದಿಗೆ ಕಂಪನಿಯು ಆ ಮಗುವಿಗೆ ಕೆಲವೊಂದು ವಿಶೇಷ ಐಟಂಗಳನ್ನು ಕಳುಹಿಸಿದೆ.

ಈ ಸಂವಹನವು ಅಂತರ್ಜಾಲದಲ್ಲಿ ಅನೇಕ ಹೃದಯಗಳನ್ನು ಗೆದ್ದಿದ್ದು, ಅನೇಕ ಮಂದಿ ಕಾಮೆಂಟ್‌ಗಳ ಮೂಲಕ ಮಗುವಿಗೆ ತಮ್ಮ ಹಾರೈಕೆಗಳನ್ನು ಕಳುಹಿಸಿದ್ದಾರೆ.

 

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...