alex Certify ಮೊಬೈಲ್‌ ಇಲ್ಲದೆ ಊಟ ಮಾಡುವುದೇ ಇಲ್ಲ ಮಕ್ಕಳು, ಈ ಅಭ್ಯಾಸ ಬಿಡಿಸಲು ಇಲ್ಲಿದೆ ಟಿಪ್ಸ್‌ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೊಬೈಲ್‌ ಇಲ್ಲದೆ ಊಟ ಮಾಡುವುದೇ ಇಲ್ಲ ಮಕ್ಕಳು, ಈ ಅಭ್ಯಾಸ ಬಿಡಿಸಲು ಇಲ್ಲಿದೆ ಟಿಪ್ಸ್‌

ಮಕ್ಕಳು ಮೊಬೈಲ್‌ ಮತ್ತು ಟಿವಿಗೆ ಅಡಿಕ್ಟ್‌ ಆಗುತ್ತಿರುವುದು ಹೊಸ ಸಂಗತಿಯೇನಲ್ಲ. ಬಹುತೇಕ ಎಲ್ಲಾ ಮಕ್ಕಳು ಊಟ-ಉಪಹಾರದ ಸಮಯದಲ್ಲಿ ಮೊಬೈಲ್‌ ವೀಕ್ಷಿಸುವ ಅಭ್ಯಾಸ ಬೆಳೆಸಿಕೊಂಡಿದ್ದಾರೆ. ಮಗು ಊಟ ಮಾಡಲಿ ಅನ್ನೋ ಕಾರಣಕ್ಕೆ ಹೆತ್ತವರು ಮೊಬೈಲ್‌ ಕೊಡುತ್ತಾರೆ. ಆದರೆ ಈ ಅಭ್ಯಾಸವನ್ನು ತಕ್ಷಣವೇ ತಪ್ಪಿಸಿ, ಇಲ್ಲದಿದ್ದಲ್ಲಿ ಬಹಳ ದೊಡ್ಡ ತೊಂದರೆ ಎದುರಾಗಬಹುದು.

ಮೊಬೈಲ್ ನೋಡುವ ಅಭ್ಯಾಸ ಮಕ್ಕಳ ದೃಷ್ಟಿಶಕ್ತಿಯನ್ನೇ ಕಸಿದುಕೊಳ್ಳಬಹುದು. ಚಿಕ್ಕ ವಯಸ್ಸಿನಲ್ಲೇ ಸಮೀಪ ದೃಷ್ಟಿಯಂತಹ ಅಪಾಯಕಾರಿ ಸಮಸ್ಯೆಗಳು ಬರುತ್ತವೆ. ಮೊಬೈಲ್‌ ಪರದೆ ಮಕ್ಕಳ ದೃಷ್ಟಿಯ ಮೇಲೆ ನೇರ ಪರಿಣಾಮ ಬೀರುತ್ತದೆ. ಆದ್ದರಿಂದ ಮಕ್ಕಳು ಅತ್ತಾಗ, ಊಟ ಮಾಡುವಾಗ ಮೊಬೈಲ್ ಫೋನ್ ನೀಡುವುದನ್ನು ತಪ್ಪಿಸಿ.

ಸಮೀಪ ದೃಷ್ಟಿ ಕಣ್ಣಿನ ಸಮಸ್ಯೆ, ಈ ಕಾಯಿಲೆಗೆ ತುತ್ತಾದರೆ ದೃಷ್ಟಿಶಕ್ತಿ ಕುಂಠಿತವಾಗುತ್ತದೆ. ಕಣ್ಣುಗಳನ್ನು ದೂರದ ವಸ್ತುಗಳ ಮೇಲೆ ಕೇಂದ್ರೀಕರಿಸಲು ಸಾಧ್ಯವಾಗುವುದಿಲ್ಲ, ದೃಷ್ಟಿ ಮಸುಕಾಗುತ್ತದೆ. ಈ ಸಮಸ್ಯೆ ಚಿಕ್ಕ ಮಕ್ಕಳಲ್ಲಿ ಕಂಡುಬರುತ್ತದೆ. ಆದಾಗ್ಯೂ ಇದನ್ನು 15 ವರ್ಷಗಳ ನಂತರ ಗುಣಪಡಿಸಬಹುದು.

ಸಮೀಪದೃಷ್ಟಿಯ ಲಕ್ಷಣಗಳು

ತಲೆನೋವು

ದೂರದ ವಸ್ತು ಅಸ್ಪಷ್ಟ ಗೋಚರ

ಹತ್ತಿರದ ವಸ್ತುಗಳ ಗೋಚರದಲ್ಲಿಯೂ ವ್ಯತ್ಯಾಸ

ಕಣ್ಣುಗಳಲ್ಲಿ ಆಯಾಸ

ಆಗಾಗ್ಗೆ ಕಣ್ಣು ಮಿಟುಕಿಸುವುದು

ನೋವು ಮತ್ತು ಉರಿ

ಸಮೀಪದೃಷ್ಟಿ ಸಮಸ್ಯೆಗೆ ಪರಿಹಾರ…

ಮೊದಲು ಮಕ್ಕಳ ಸ್ಕ್ರೀನ್‌ ಟೈಮಿಂಗ್‌ ಕಡಿಮೆ ಮಾಡಿ. ದೀರ್ಘಕಾಲದವರೆಗೆ ಮೊಬೈಲ್, ಟಿವಿ, ಕಂಪ್ಯೂಟರ್ ನೋಡುವುದನ್ನು ತಡೆಯಬೇಕು. ಮಗುವಿನ ಸಮಯವನ್ನು ಬೇರೆ ಕೆಲಸಗಳಿಗೆ ಬಳಸಬೇಕು.

ಮಕ್ಕಳು ಮನೆಯೊಳಗೆ ಕುಳಿತು ಮೊಬೈಲ್‌ನಲ್ಲಿ ಆಟವಾಡುತ್ತಲೇ ಇರುತ್ತಾರೆ. ಅದರ ಬದಲು ಹೊರಗೆ ಸ್ನೇಹಿತರೊಂದಿಗೆ ಆಟವಾಡಲು ಹೇಳಿ. ಅಥವಾ ನೀವೇ ಪಾರ್ಕ್‌ ಮತ್ತು ತೆರೆದ ಸ್ಥಳಕ್ಕೆ ಕರೆದೊಯ್ಯಿರಿ.

ಮಕ್ಕಳ ಗಮನವನ್ನು ಮೊಬೈಲ್ ಗೇಮ್‌ಗಳಿಂದ ಬೇರೆಡೆಗೆ ತಿರುಗಿಸಿ. ಒಳಾಂಗಣ ಆಟಗಳತ್ತ ಆಸಕ್ತಿ ಹುಟ್ಟುಹಾಕಲು ಪ್ರಯತ್ನಿಸಿ. ಅವರ  ಮನಸ್ಸಿನ ಮೇಲೆ ಒಳ್ಳೆಯ ಪರಿಣಾಮ ಬೀರುವ ಆಟ ಆಡುವುದನ್ನು ರೂಢಿಸಿಕೊಳ್ಳಿ. ಈ ಆಟಗಳನ್ನು ಮಕ್ಕಳು ಆನಂದಿಸುತ್ತಾರೆ ಮತ್ತು ಹೊಸದನ್ನು ಕಲಿಯುತ್ತಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...