ಈಗ ಜೀವನ ಶೈಲಿ ಬದಲಾಗಿದೆ. ಹಿರಿಯರು ಹಳ್ಳಿಗಳಲ್ಲಿದ್ದರೆ ಅವ್ರ ಮಕ್ಕಳು ಪಟ್ಟಣದಲ್ಲಿ ಕೆಲಸ ಮಾಡುತ್ತಿರುತ್ತಾರೆ. ಮಗ ಅಥವಾ ಮಗಳ ಕುಟುಂಬ ಮಾತ್ರ ನಗರದಲ್ಲಿರುವ ಕಾರಣ ಮನೆಯಲ್ಲಿ ಚಿಕ್ಕ ಮಕ್ಕಳನ್ನು ನೋಡಿಕೊಳ್ಳಲು ಅಜ್ಜ-ಅಜ್ಜಿ ಇರುವುದಿಲ್ಲ. ಕೆಲಸದ ಕಾರಣ ಪಾಲಕರು ಸಣ್ಣ ಮಕ್ಕಳನ್ನು ಮನೆಯಲ್ಲಿ ಬಿಟ್ಟು ಹೋಗ್ತಾರೆ. ನೀವೂ ಮಕ್ಕಳೊಬ್ಬರನ್ನೇ ಮನೆಯಲ್ಲಿ ಬಿಟ್ಟು ಹೋಗುವವರಾಗಿದ್ದರೆ ಕೆಲ ಸಂಗತಿಗಳನ್ನು ತಿಳಿದಿರಿ.
ಮನೆಯಿಂದ ಹೊರಗೆ ಹೋಗುವ ಮೊದಲು ಸ್ವಿಚ್ ಬೋರ್ಡ್ ಗೆ ಟೇಪ್ ಹಚ್ಚಿ. ನೀವು ಇಲ್ಲದ ಸಮಯದಲ್ಲಿ ಮಕ್ಕಳು ಅದನ್ನು ಮುಟ್ಟುವ ಸಾಧ್ಯತೆಯಿರುತ್ತದೆ.
ಮನೆಯಿಂದ ಹೊರ ಹೋಗುವ ಮೊದಲು ಗ್ಯಾಸ್ ಬಂದ್ ಮಾಡುವುದನ್ನು ಮರೆಯಬೇಡಿ. ಸಿಲಿಂಡರ್ ನಾಬ್ ಕೂಡ ಬಂದ್ ಮಾಡಿ.
ಕೆಲ ಮಕ್ಕಳು ಒಳಗೆ ಒಂಟಿಯಾಗಿರಲು ಹೆದರುತ್ತಾರೆ. ಅವ್ರ ಜೊತೆ ಸರಿಯಾಗಿ ಮಾತನಾಡಿ, ತಿಳಿಸಿ ಹೇಳಿ. ಸ್ವಲ್ಪ ಸಮಯ ಅವ್ರನ್ನು ಏಕಾಂಗಿಯಾಗಿ ಬಿಟ್ಟು ರೂಢಿ ಮಾಡಿ. ಬಹುತೇಕ ಕೆಲಸವನ್ನು ಒಂಟಿಯಾಗಿ ಮಾಡಬೇಕಾಗುತ್ತದೆ ಎಂದು ಅವ್ರಿಗೆ ತಿಳಿಸಿ ಹೇಳಿ.
ಮನೆಯಲ್ಲಿರುವ ಚಾಕು, ಸೂಜಿ ಸೇರಿದಂತೆ ಚೂಪಾದ ಆಯುಧವನ್ನು ಮಕ್ಕಳ ಕೈಗೆ ಸಿಗುವಂತೆ ಇಡಬೇಡಿ.
ಸಾಕು ಪ್ರಾಣಿ ಮನೆಯಲ್ಲಿದ್ದರೆ ಅದ್ರ ಬಗ್ಗೆಯೂ ಗಮನ ನೀಡಬೇಕಾಗುತ್ತದೆ. ಪ್ರಾಣಿಯನ್ನು ಬೇರೆ ಕೋಣೆಯಲ್ಲಿ ಕೂಡಿ ಹಾಕಿ ಹೊರಗೆ ಹೋಗಿ.
ಮಕ್ಕಳಿಗೆ ಸಣ್ಣ ಪುಟ್ಟ ಕೆಲಸ ಕಲಿಸಿ. ಮನೆ ಸದಸ್ಯರ ನಂಬರ್ ತಿಳಿಸಿರಿ.
ಮಕ್ಕಳನ್ನು ಮನೆಯಲ್ಲಿ ಕೂಡಿ ಹಾಕಿ ಹೊರಗೆ ಹೋಗಬೇಡಿ. ಅಗತ್ಯವಿದ್ರೆ ಪಕ್ಕದ ಮನೆಯವರನ್ನು ಸಹಾಯಕ್ಕೆ ಕರೆಯುವಂತೆ ಮಕ್ಕಳಿಗೆ ಹೇಳಿ.