alex Certify ಅಫ್ಘನ್ನರ ’ಹೃದಯವಿ‌ದ್ರಾವಕ’ ಪರಿಸ್ಥಿತಿಯನ್ನು ಬಿಂಬಿಸುತ್ತೆ ಈ ಪೋಸ್ಟರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಫ್ಘನ್ನರ ’ಹೃದಯವಿ‌ದ್ರಾವಕ’ ಪರಿಸ್ಥಿತಿಯನ್ನು ಬಿಂಬಿಸುತ್ತೆ ಈ ಪೋಸ್ಟರ್

ಅಫ್ಘಾನಿಸ್ತಾನದಲ್ಲಿ ಪ್ರಜಾಪ್ರಭುತ್ವ ಸರ್ಕಾರ ಪತನಗೊಂಡು ತಾಲಿಬಾನ್ ಆಡಳಿತ ಮತ್ತೆ ಸ್ಥಾಪಿತವಾದ ಬಳಿಕ, ಅಲ್ಲಿನ ಜನರು ಭಾರೀ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಜಾಗತಿಕ ಮಾಧ್ಯಮಗಳು ವರದಿ ಮಾಡುತ್ತಿವೆ.

ತಾಲಿಬಾನಿ ಆಡಳಿತದಲ್ಲಿ ದೇಶದ ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿದ್ದು, ಜನರು ತಮ್ಮ ದೇಹಗಳ ಅಂಗಾಂಗಗಳನ್ನೇ ಮಾರಾಟ ಮಾಡಿಕೊಂಡು ಬದುಕು ಸಾಗಿಸಬೇಕಾದ ದುಸ್ತರ ದಿನಗಳನ್ನು ಜೀವಿಸುತ್ತಿದ್ದಾರೆ ಎನ್ನಲಾಗಿದೆ.

ಕಾಬೂಲ್‌ನ ಬೀದಿಯೊಂದರ ಮರವೊಂದಕ್ಕೆ ನೇತು ಹಾಕಲಾಗಿದ್ದ ಈ ಭಿತ್ತಿಪತ್ರವು ಅಫ್ಘನ್ನರ ಸದ್ಯದ ಪರಿಸ್ಥಿತಿಯನ್ನು ಬಿಡಿಸಿ ಹೇಳುತ್ತಿದೆ. ’ಕಿಡ್ನಿ ಮಾರಾಟಕ್ಕಿದೆ’ ಎಂದು ಭಿತ್ತಿ ಪತ್ರದಲ್ಲಿ ಹಾಕಲಾಗಿದೆ.

ಕೋಕಾ ಕೋಲಾ ಕುಡಿದ ಕೋತಿ…! ಮಂಗನ ಟ್ಯಾಲೆಂಟ್ ವಿಡಿಯೋದಲ್ಲಿ ಸೆರೆ

ನೂರಾರು ಮಂದಿ ಕೆಲಸ ಕಳೆದುಕೊಂಡಿದ್ದು, ಕೆಲಸ ಹಾಗೂ ವ್ಯವಹಾರಗಳು ಸ್ಥಗಿತಗೊಂಡಿವೆ. ಇದೇ ವೇಳೆ ಅತ್ಯಗತ್ಯ ವಸ್ತುಗಳಾದ ಆಹಾರ ಹಾಗೂ ಇಂಧನದ ಬೆಲೆಗಳಲ್ಲೂ ಸಹ ನಿರೀಕ್ಷೆ ಮೀರಿದ ಹೆಚ್ಚಳವಾಗಿದೆ. ಅದರೊಂದಿಗೆ ಚಳಿಗಾಲದ ಸಂಕಷ್ಟಗಳಿಂದ ಅಫ್ಘನ್ನರ ಪರಿಸ್ಥಿತಿ ತೀರಾ ಹದಗೆಟ್ಟಿದೆ ಎಂದು ಖಾಮಾ ಪ್ರೆಸ್ ಎಂಬ ಸುದ್ಧಿ ಸಂಸ್ಥೆಯೊಂದು ತಿಳಿಸಿದೆ.

Kidney for sale”, reads a placard stuck on a tree in Kabul - The Khaama  Press News Agency

ದೇಶದ 22.8 ದಶಲಕ್ಷ ಮಂದಿ — ಅರ್ಧಕ್ಕಿಂತ ಹೆಚ್ಚಿನ ಜನಸಂಖ್ಯೆ — ಆಹಾರ ಅಭದ್ರತೆಯಿಂದ ನರಳಲಿದ್ದಾರೆ ಎಂದು ವಿಶ್ವ ಸಂಸ್ಥೆಯ ವಿಶ್ವ ಸಂಸ್ಥೆಯ ಜಾಗತಿಕ ಆಹಾರ ಕಾರ್ಯಕ್ರಮ ಮತ್ತು ಆಹಾರ ಮತ್ತು ಕೃಷಿ ಸಂಸ್ಥೆ ತಿಳಿಸಿದೆ. ಇವರ ಪೈಕಿ 8.7 ದಶಲಕ್ಷ ಮಂದಿ ಬಹುತೇಕ ಬರಗಾಲದ ಸನಿಹವಿದ್ದಾರೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.

ಇದಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿರುವ ಇಂಟರ್ನ್ಯಾಷನಲ್ ಕ್ರೈಸಿಸ್ ಸಮೂಹ (ಐಸಿಜಿ), ಕಳೆದ 20 ವರ್ಷಗಳ ಕದನಕ್ಕಿಂತಲೂ ಈಗಿನ ಹಸಿವೆಯಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸಾಯಲಿದ್ದಾರೆ ಎಂದಿದೆ.

“ತಾಲಿಬಾನ್‌ ಮರಳಿ ಬಂದ ಬಳಿಕ, ಭಯೋತ್ಪಾದಕ ಸಂಘಟನೆಗೆ ಆಧುನಿಕ ಆರ್ಥಿಕತೆಯನ್ನು ಮುನ್ನಡೆಸುವ ಕ್ಷಮತೆ ಇಲ್ಲದೇ ಇರುವ ಕಾರಣದಿಂದ ಹಸಿವೆ ಹಾಗೂ ಅರಾಜಕತೆಯಿಂದಾಗಿ ಸಾಯುವ ಅಫ್ಘನ್ನರ ಸಂಖ್ಯೆಯು ಕಳೆದ ಎರಡು ದಶಕಗಳಿಂದ ಬಾಂಬ್‌ ಹಾಗೂ ಗುಂಡುಗಳಿಗೆ ಮೃತಪಟ್ಟ ಮಂದಿಗಿಂತಲೂ ಹೆಚ್ಚಿರಲಿದೆ,” ಎಂದು ಐಸಿಜಿ ಹೇಳಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...