ದೇಹದ ಆರೋಗ್ಯ ಚೆನ್ನಾಗಿ ಇರಬೇಕು ಅಂದರೆ ಕಿಡ್ನಿ ಆರೋಗ್ಯವನ್ನ ಕಾಪಾಡಿಕೊಳ್ಳುವುದು ತುಂಬಾನೇ ಮುಖ್ಯ. ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರಗೆ ಹಾಕುವಲ್ಲಿ ಕಿಡ್ನಿ ಬಹುಮುಖ್ಯ ಪಾತ್ರ ವಹಿಸುತ್ತದೆ. ಇನ್ಸುಲಿನ್ ಮಟ್ಟ ನಿಯಂತ್ರಣದಲ್ಲಿ ಇರಲು ಕಿಡ್ನಿ ಸಹಕಾರಿಯಾಗಿದೆ. ಆದರೆ ಈಗಿನ ಆಧುನಿಕ ಜೀವನಶೈಲಿಯಿಂದಾಗಿ ಕಿಡ್ನಿ ಹಾನಿ ಸೇರಿದಂತೆ ಮೂತ್ರಪಿಂಡಕ್ಕೆ ಸಂಬಂಧಿಸಿದ ಸಾಕಷ್ಟು ಸಮಸ್ಯೆಗಳು ವರದಿಯಾಗುತ್ತಲೇ ಇರುತ್ತದೆ. ನಿಮ್ಮ ದೇಹದಲ್ಲಿ ಕಾಣಿಸಿಕೊಳ್ಳುವ ಈ ಪ್ರಮುಖ ಲಕ್ಷಣಗಳು ನಿಮ್ಮ ಕಿಡ್ನಿಯ ಅನಾರೋಗ್ಯವನ್ನು ಸಾಂಕೇತಿಸುತ್ತವೆ. ಅವುಗಳ ಬಗ್ಗೆ ತಿಳಿದುಕೊಳ್ಳೋಣ :
ನೋಕ್ಟುರಿಯಾ ಅಥವಾ ಪದೇ ಪದೇ ಮೂತ್ರ ವಿಸರ್ಜನೆ : ರಾತ್ರಿಯಲ್ಲಿ ನಿದ್ದೆ ಮಧ್ಯದಲ್ಲಿ ನಿಮಗೆ ಮೂತ್ರಕ್ಕೆ ಎಚ್ಚರವಾಗುವುದು ಇದರ ಆರಂಭಿಕ ಲಕ್ಷಣವಾಗಿದೆ. ನೀವು ರಾತ್ರಿ ವೇಳೆ ಎರಡರಿಂದ ಮೂರು ಬಾರಿ ಮೂತ್ರ ವಿಸರ್ಜನೆಗೆ ಏಳುತ್ತಿದ್ದೀರಾ ಎಂದರೆ ಇದು ನೋಕ್ಟುರಿಯಾದ ಲಕ್ಷಣವಾಗಿರಬಹುದು. ಇದನ್ನು ನಿರ್ಲಕ್ಷಿಸುವುದು ಒಳ್ಳೆಯದಲ್ಲ.
ನಿದ್ರಾಹೀನತೆ : ಮೆಲಟೋನಿನ್ ಎಂಬ ಹಾರ್ಮೋನ್ ನಿದ್ರಾಹೀನತೆಗೆ ಕಾರಣವಾಗುತ್ತದೆ. ಆರೋಗ್ಯವಂತ ವ್ಯಕ್ತಿಗಳಲ್ಲಿ ಹಗಲಿನಲ್ಲಿ ಇದರ ಪ್ರಮಾಣ ಕಡಿಮೆ ಇರುತ್ತದೆ ಹಾಗೂ ರಾತ್ರಿ ವೇಳೆ ಈ ಪ್ರಮಾಣ ಹೆಚ್ಚಾಗಬಹುದು. ಮೆಲಟೋನಿನ್ ಮಟ್ಟವು ಗಮನಾರ್ಹ ಇಳಿಕೆಯು ಮೂತ್ರಪಿಂಡದ ಕಾಯಿಲೆಗೆ ಕಾರಣವಾಗುತ್ತದೆ. ಇದು ನಿದ್ರಾಹೀನತೆಗೆ ಕಾರಣವಾಗುತ್ತದೆ.
ಉಸಿರಾಟದ ತೊಂದರೆ: ಡಿಸ್ಪ್ನಿಯಾ ಮೂತ್ರಪಿಂಡದ ಕಾಯಿಲೆಗಳಿಗೆ ಸಂಬಂಧಿಸಿದ ಸಾಮಾನ್ಯ ಲಕ್ಷಣಗಳಲ್ಲಿ ಒಂದಾಗಿದೆ, ಇದು ಮೂತ್ರಪಿಂಡದ ದುರ್ಬಲಗೊಂಡ ದ್ರವದ ನಿರ್ವಹಣೆಗೆ ಕಾರಣವಾಗಿದೆ. ಮಲಗಿರುವ ಸಂದರ್ಭದಲ್ಲಿ ಶ್ವಾಸಕೋಶಕ್ಕೆ ರಕ್ತದ ಹಂಚಿಕೆ ಪ್ರಮಾಣ ಏರುಪೇರಾಗಿ ಉಸಿರಾಟಕ್ಕೆ ತೊಂದರೆಯುಂಟಾಗುತ್ತದೆ .
ಪಾದಗಳಲ್ಲಿ ಊತ : ಪಾದಗಳಲ್ಲಿ ಊತ ಕಾಣಿಸಿಕೊಳ್ಳುತ್ತಿದ್ದರೆ ನೀವು ಸೀದಾ ವೈದ್ಯರ ಬಳಿ ಧಾವಿಸುವುದು ಒಳ್ಳೆಯದು. ಇದು ಸಾಮಾನ್ಯವಾಗಿ ಮೂತ್ರಪಿಂಡ ಸಮಸ್ಯೆಯ ಲಕ್ಷಣವಾಗಿದೆ. ಸಂಜೆ ಹಾಗೂ ರಾತ್ರಿ ವೇಳೆಯಲ್ಲಿ ಈ ಊತ ಹೆಚ್ಚಾಗುತ್ತದೆ. ಬೆಳಗ್ಗೆ ವೇಳೆಗೆ ಕಡಿಮೆಯಾಗುತ್ತದೆ. ದೀರ್ಘಕಾಲದ ಮೂತ್ರಪಿಂಡ ವೈಫಲ್ಯ ಅಥವಾ ಗ್ಲೋಮೆರುಲೋನೆಫ್ರಿಟಿಸ್ ನಿಂದಾಗಿ ಇದು ಉಂಟಾಗಬಹುದು.