
ಬೆಂಗಳೂರು: ಗುತ್ತಿಗೆದಾರನನ್ನು ಅಪಹರಿಸಿ 3 ಕೋಟಿ ರೂ.ಗೆ ಬೇಡಿಕೆ ಇಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ಮಾಜಿ ಕಾರ್ಪೊರೇಟರ್ ಜಿ.ಕೆ. ವೆಂಕಟೇಶ್ ಅವರನ್ನು ಯಶವಂತಪುರ ಠಾಣೆ ಪೋಲೀಸರು ಬಂಧಿಸಿದ್ದಾರೆ.
ಯಶವಂತಪುರ ವಾರ್ಡ್ ನಲ್ಲಿ ಗುತ್ತಿಗೆದಾರ ಚಂದ್ರು ಕಾಮಗಾರಿ ಗುತ್ತಿಗೆ ಪಡೆದಿದ್ದರು. ಬಿಬಿಎಂಪಿ ಮಾಜಿ ಕಾರ್ಪೊರೇಟರ್ ಜಿ.ಕೆ. ವೆಂಕಟೇಶ್ ಎರಡು ದಿನಗಳ ಹಿಂದೆ ಚಂದ್ರು ಅವರನ್ನು ಅಪಹರಿಸಿ, ನಿನ್ನಿಂದಾಗಿ ಕಾಮಗಾರಿ ಕೈತಪ್ಪಿ ನಷ್ಟವಾಗಿದ್ದು, ಅದನ್ನು ಭರಿಸಲು 3 ಕೋಟಿ ರೂಪಾಯಿ ಕೊಡುವಂತೆ ಬೇಡಿಕೆ ಇಟ್ಟಿದ್ದಾರೆ. 3 ಕೋಟಿ ರೂಪಾಯಿ ಚೆಕ್ ಪಡೆದು ಹಲ್ಲೆ ಮಾಡಿ ಗುತ್ತಿಗೆದಾರ ಚಂದ್ರುನನ್ನು ಬಿಡುಗಡೆ ಮಾಡಿದ್ದಾರೆ.
ಚಂದ್ರು ದೂರಿನ ಮೇರೆಗೆ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವೆಂಕಟೇಶ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಪೊಲೀಸರು ಬಳಿಕ ಬಂಧಿಸಿದ್ದಾರೆ.