ಬೆಂಗಳೂರು: ಆರ್.ಎಸ್.ಎಸ್ ಕಾರ್ಯಕರ್ತ ಎಂದು ಹೇಳಿಕೊಂಡು ವ್ಯಕ್ತಿಯೊಬ್ಬ ಗೋಮಾಂಸ ಸಾಗಿಸುತ್ತಿದ್ದ ವಾಹನ ಹಾಗೂ ಚಾಲಕನನ್ನು ಬೆದರಿಸಿ ಕಿಡ್ನ್ಯಾಪ್ ಮಾಡಿರುವ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ.
ಕಿಡ್ನ್ಯಾಪ್ ಮಾಡಿದ್ದ ಆರೋಪಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಮೊಹಮ್ಮದ್ ಎಂದು ಗುರುತಿಸಲಾಗಿದೆ. ಸೆ.10ರಂದು ಮೊಹಮ್ಮದ್, ಮೂರು ಯುವಕರನ್ನು ಬಿಟ್ಟು ಗೋಮಾಂಸ ಸಾಗಿಸುತ್ತಿದ್ದ ಜಾವೀದ್ ಎಂಬಾತನನ್ನು ಗಾಡಿ ಸಮೇತ ಕಿಡ್ನಾಪ್ ಮಾಡಿಸಿದ್ದ.
ಬಳಿಕ ಜಾವೀದ್ ನನ್ನು ಬಿಟ್ಟು ಕಳುಹಿಸಲು 1 ಲಕ್ಷ ಹಣಕ್ಕೆ ಡಿಮ್ಯಾಂಡ್ ಮಾಡಿದ್ದಾನೆ. ಬಳಿಕ 10 ಸಾವಿರ ಹಣ ಪಡೆದು ಜಾವೀದ್ ನನ್ನು ಬಿಟ್ಟು ಕಳುಹಿಸಿದ್ದಾನೆ. ಜಾವೀದ್ ನ ಗಾಡಿ ಸೆಂಟ್ ಜಾನ್ ಸಿಗ್ನಲ್ ಬಳಿ ಇದೆ ಎಂದು ಹೇಳಿ ಕಳುಹಿಸಿದ್ದರು. ಸ್ಥಳಕ್ಕೆ ಬಂದು ನೋಡಿದಾಗ ಗಾಡಿ ಮಾತ್ರ ಇತ್ತು. ಬಳಿಕ ಜಾವೀದ್ ಆಡುಗೋಡಿ ಠಾಣೆಯಲ್ಲಿ ದೂರು ನೀಡಿದ್ದ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿ ವಿಚಾರಿಸಿದಾಗ ಆರ್.ಎಸ್.ಎಸ್ ಕಾರ್ಯಕರ್ತರ ಹೆಸರಲ್ಲಿ ಗೋಮಾಂಸ ಕಳ್ಳತನ ಕಹಾನಿ ಬಯಲಿಗೆ ಬಂದಿದೆ.
ಜಾವೀದ್ ಸಾಗಾಟ ಮಾಡಬೇಕಿದ್ದ ಗೋಮಾಂಸವನ್ನು ಅಂಗಡಿಯ ಮಾಲೀಕನೇ ವಾಹನ ಸಮೇತ ಕಿಡ್ನ್ಯಾಪ್ ಮಾಡಿ, ಮಾಂಸವನ್ನು ತನ್ನ ಅಂಗಡಿಗೆ ತರಿಸಿಕೊಂಡು, ಗಾಡಿ ಕಳುಹಿಸಿ ಡೆಲವರಿಯಾಗಿಲ್ಲ ಎಂದು ಕಥೆಕಟ್ಟಿದ್ದ. ಮಾಂಸ ಕದಿಯಲೆಂದೇ ಆರ್. ಎಸ್. ಎಸ್ ಕಾರ್ಯಕರ್ತ ಎಂದು ಹೆದರಿಸಿ ಈ ಕಥೆ ಕಟ್ಟಿದ್ದಾಗಿ ಅಂಗಡಿ ಮಾಲೀಕ ತಪ್ಪೊಪ್ಪಿಕೊಂಡಿದ್ದಾನೆ.