ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಂದು ಅಪಹರಣ ಪ್ರಕರಣ ಬೆಳಕಿಗೆ ಬಂದಿದೆ. ಲೇಡಿ ಗ್ಯಾಂಗ್ ಜೊತೆ ಸೇರಿ ಕನ್ನಡಪರ ಸಂಘಟನೆ ಅಧ್ಯಕ್ಷ ಬ್ಯಾಂಕ್ ಉದ್ಯೋಗಿಯೊಬ್ಬರನ್ನು ಅಪಹರಣ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಕನ್ನಡಪರ ಸಂಘಟನೆ ಅಧ್ಯಕ್ಷ ಪ್ರಕಾಶ್ ಅಲಿಯಾಸ್ ಕನ್ನಡ ಪ್ರಕಾಶ್ ಹಾಗೂ ಗ್ಯಾಂಗ್ ವಿರುದ್ಧ ಶಂಕರಪುರ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ. ಬ್ಯಾಂಕ್ ಉದ್ಯೋಗಿ ಮಂಜುನಾಥ್ ನನ್ನು ಅಪಹರಿಸಿ, ಬಳಿಕ ಪ್ರಕಾಶ್ ಗೆ ಸೇರಿದ ಕಚೇರಿಯಲ್ಲಿ ಮಂಜುನಾಥ್ ಗೆ ಥಳಿಸಲಾಗಿದೆ.
ಕಿಡ್ನ್ಯಾಪ್ ಮಾಡಿ ಹಣ, ಮನೆಯ ದಾಖಲೆಗಳನ್ನು ಕಸಿದುಕೊಂಡಿರುವ ಆರೋಪಿಗಳು ಚಿತ್ರಹಿಂಸೆ ನೀಡಿದ್ದಾರೆ. ಮಂಜುಳಾ ಎಂಬುವವರಿಂದ 8 ಲಕ್ಷ ರೂಪಾಯಿ ಸಾಲವನ್ನು ಮಂಜುನಾಥ್ ಪಡೆದಿದ್ದರು. ಸಾಲ ಪಡೆದಿದ್ದ ಹಣ ವಾಪಾಸ್ ಕೊಡದೇ ಮಂಜುನಾಥ್ ಸತಾಯಿಸಿದ್ದ. ಈ ಹಿನ್ನೆಲೆಯಲ್ಲಿ ಕನ್ನಡ ಪ್ರಕಾಶ್ ಜೊತೆ ಸೇರಿ ಗ್ಯಾಂಗ್ ಮಂಜುನಾಥ್ ನನ್ನು ಕಿಡ್ನ್ಯಾಪ್ ಮಾಡಿದೆ.
ಪ್ರಕರಣ ಸಂಬಂಧ ಮಂಜುಳಾ, ಪ್ರಕಾಶ್, ಚಲಪತಿ ಸೇರಿ 6 ಜನರ ವಿರುದ್ಧ ಎಫ್ ಐಆರ್ ದಾಖಲಾಗಿದೆ.