ಬೆಂಗಳೂರು: ಬೆಂಗಳೂರಿನಲ್ಲಿ ಚೇಸ್ ಮಾಡಿ ಕಿಡ್ನ್ಯಾಪ್ ಆರೋಪಿಯನ್ನು ಬಂಧಿಸಲಾಗಿದೆ. ಆಡುಗೋಡಿ ಪೊಲೀಸರಿಂದ ಕಿಡ್ನಾಪ್ ಆಗಿದ್ದ ಯುವಕನನ್ನು ರಕ್ಷಣೆ ಮಾಡಲಾಗಿದೆ. ನಾಲ್ವರು ಅಪಹರಣಕಾರರ ಬಗ್ಗೆ ಒಬ್ಬ ಆರೋಪಿ ಗೋಪಿಯನ್ನು ಬಂಧಿಸಲಾಗಿದೆ. ಅಪಹರಣಕ್ಕೆ ಒಳಗಾಗಿದ್ದ ತೌಹಿದ್ ನನ್ನ ಪೊಲೀಸರು ರಕ್ಷಿಸಿದ್ದಾರೆ.
ಹಣಕ್ಕಾಗಿ ತೌಹಿದ್ ನನ್ನು ಅಪಹರಿಸಿ ನಾಲ್ವರು ಕಾರ್ ನಲ್ಲಿ ತೆರಳುತ್ತಿದ್ದರು. ರಾತ್ರಿ 11:40ರ ಸುಮಾರಿಗೆ ಬ್ಯಾರಿಕೇಡ್ ಗೆ ಆರೋಪಿಗಳ ಕಾರ್ ಡಿಕ್ಕಿಯಾಗಿದೆ. ಕೋರಮಂಗಲ 100 ಅಡಿ ರಸ್ತೆಯ ಬಳಿ ಚೆಕ್ ಪೋಸ್ಟ್ ಬ್ಯಾರಿಕೇಡ್ ಗೆ ಕಾರ್ ಡಿಕ್ಕಿಯಾಗಿದ್ದು, ಈ ವೇಳೆ ಕಾರ್ ನಲ್ಲಿದ್ದ ಒಬ್ಬ ಕಾಪಾಡಿ ಎಂದು ಚೀರಿಕೊಂಡಿದ್ದಾನೆ.
ಆತನ ಚೀರಾಟ ಕೇಳಿದ ಆಡುಗೋಡಿ ಇನ್ಸ್ ಪೆಕ್ಟರ್ ಮಂಜುನಾಥ್ ಅಲರ್ಟ್ ಆಗಿದ್ದಾರೆ. ಆರೋಪಿಗಳ ಕಾರ್ ಅನ್ನು ಬೆನ್ನಟ್ಟಿದ್ದು ಒಬ್ಬ ಆರೋಪಿಯನ್ನು ಬಂಧಿಸಲಾಗಿದೆ. ಅಪಹರಣಕ್ಕೆ ಒಳಗಾಗಿದ್ದ ತೌಹಿದ್ ನನ್ನು ಇನ್ಸ್ ಪೆಕ್ಟರ್ ರಕ್ಷಣೆ ಮಾಡಿದ್ದಾರೆ.
ಮೂರು ದಿನದ ಹಿಂದೆ ನಾಲ್ವರ ತಂಡ ತೌಹಿದ್ ನನ್ನು ಅಪಹರಣ ಮಾಡಿದ್ದು, ಬಂಡೆಪಾಳ್ಯ ಠಾಣೆ ವ್ಯಾಪ್ತಿಯಲ್ಲಿ ಅಪಹರಣ ಮಾಡಲಾಗಿತ್ತು. 60 ಸಾವಿರ ರೂಪಾಯಿಗೆ ಅಪಹರಣಕಾರರು ಬೇಡಿಕೆ ಇಟ್ಟಿದ್ದರು. ನಿನ್ನೆ ಸಂಜೆ 4:30ಕ್ಕೆ ತೌಹಿದ್ ತಾಯಿ 35,000 ರೂ. ಹಣ ಕೊಟ್ಟಿದ್ದರು. ಹಣ ನೀಡಿದ ನಂತರವೂ ಬಿಡುಗಡೆ ಮಾಡಿರಲಿಲ್ಲ.
ಈ ಬಗ್ಗೆ ದೂರು ನೀಡಲು ಮಡಿವಾಳ ಪೊಲೀಸ್ ಠಾಣೆಗೆ ಕುಟುಂಬದವರು ಆಗಮಿಸಿದ್ದರು. ಅಷ್ಟರಲ್ಲಾಗಲೇ ಆರೋಪಿಯನ್ನು ಪೊಲೀಸರು ಬಂಧಿಸಿದ್ದರು. ಅಪಹರಣಕ್ಕೊಳಗಾದ ತೌಹಿದ್ ವಿರುದ್ಧವೂ ಹಲವು ಕೇಸ್ ಗಳು ಇವೆ. ಪ್ರಕರಣ ಬಂಡೆಪಾಳ್ಯ ಠಾಣೆ ವ್ಯಾಪ್ತಿಯಲ್ಲಿ ನಡೆದ ಹಿನ್ನೆಲೆಯಲ್ಲಿ ಇಬ್ಬರನ್ನು ಬಂಡೆಪಾಳ್ಯ ಠಾಣೆಗೆ ಹಸ್ತಾಂತರ ಮಾಡಲಾಗಿದೆ ಎಂದು ಹೇಳಲಾಗಿದೆ.