ಸತ್ನಾ: ನಾಲ್ಕು ವರ್ಷದ ಬಾಲಕನೊಬ್ಬ ತನ್ನ ಮನೆಯಲ್ಲಿ ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ 5 ರೂಪಾಯಿ ನಾಣ್ಯ ನುಂಗಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಕೂಡಲೇ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಿ ಶಸ್ತ್ರಚಿಕಿತ್ಸೆಯ ಮೂಲಕ ನಾಣ್ಯವನ್ನು ಹೊರತೆಗೆಯಲಾಯಿತು.
ನಾಣ್ಯ ನುಂಗಿದ ಬಾಲಕ ಸತ್ನಾ ಜಿಲ್ಲೆಯ ಸಿವಿಲ್ ಆಸ್ಪತ್ರೆಯಲ್ಲಿ ‘ಫೋಲಿ ಕ್ಯಾತಿಟರ್’ ಎಂಬ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾನೆ. ಇನ್ನು ನಾಣ್ಯ ನುಂಗಿದ ಬಾಲಕನನ್ನು ಉತ್ತರ ಪ್ರದೇಶದ ವಿವಿಧ ಆಸ್ಪತ್ರೆಗೆ ಕರೆದೊಯ್ದರೂ ಚಿಕಿತ್ಸೆ ಕೊಡಿಸಲು ಸಾಧ್ಯವಾಗಿಲ್ಲ. ಮೂರು ದಿನ ಅಲೆದಾಡಿದ ಬಳಿಕ ಕೊನೆಗೆ ಮಧ್ಯಪ್ರದೇಶದ ಸತ್ನಾ ಜಿಲ್ಲಾ ಆಸ್ಪತ್ರೆಗೆ ಪೋಷಕರು ಮಗುವನ್ನು ಕರೆತಂದಿದ್ದಾರೆ.
ಆರ್ಯನ್ ಸಾಕೇತ್ ಎಂಬ ಬಾಲಕನಿಗೆ ನಾಣ್ಯವು ಅನ್ನನಾಳದ ಮೇಲ್ಭಾಗದಲ್ಲಿ ಅಥವಾ ಗಂಟಲಿನಿಂದ ಹೊಟ್ಟೆಗೆ ಆಹಾರವನ್ನು ಸಾಗಿಸುವ ಆಹಾರ ಪೈಪ್‌ನಲ್ಲಿ ಆಕಸ್ಮಿಕವಾಗಿ ಸಿಲುಕಿಕೊಂಡಿತ್ತು. ಇದರಿಂದ ಆತ ಅಪಾರವಾದ ನೋವಿನಿಂದ ಬಳಲುತ್ತಿದ್ದ. ಏನನ್ನಾದರೂ ತಿನ್ನಲು ಪ್ರಯತ್ನಿಸಿದಾಗ ಪ್ರತಿ ಬಾರಿ ವಾಂತಿ ಮಾಡುತ್ತಿದ್ದ.
ಪೋಷಕರು ಬಾಲಕನನ್ನು ನರ್ಸಿಂಗ್ ಹೋಮ್ಗೆ ದಾಖಲಿಸಿದ್ದರು. ಈ ವೇಳೆ ಎಕ್ಸ್-ರೇ ಮಾಡಿದಾಗ ನಾಣ್ಯ ಇರುವುದು ಪತ್ತೆಯಾಗಿದೆ. ನಾಣ್ಯದಿಂದಾಗಿ ಬಾಲಕ ತೀವ್ರ ಅಸ್ವಸ್ಥತೆಗೆ ಒಳಗಾಗಿದ್ದನು. ವಸ್ತುವನ್ನು ಹೊರತೆಗೆಯುವಲ್ಲಿ ವಿಳಂಬ ಮಾಡಿದ್ರೆ, ಅದು ಸೋಂಕು ಅಥವಾ ಛಿದ್ರಗೊಂಡ ಆಹಾರ ಪೈಪ್‌ನಂತಹ ಸಂಭವನೀಯ ಅಪಾಯಕಾರಿ ಪರಿಸ್ಥಿತಿಗಳಿಗೆ ಕಾರಣವಾಗಬಹುದು ಎಂದು ವೈದ್ಯರು ತಿಳಿಸಿದ್ದಾರೆ.
ಎಲ್ಲಾ ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡ ನಂತರ, ಡಾ.ಸಂಜೀವ್ ಪ್ರಜಾಪತಿ ಮತ್ತು ನರ್ಸಿಂಗ್ ಸಿಬ್ಬಂದಿ ಸುನೇನಾ ರಜಾಕ್ ಮತ್ತು ಸಂದೀಪ್ ಪಟೇಲ್ ತಜ್ಞರ ತಂಡವು, ‘ಫೋಲಿ ಕ್ಯಾತಿಟರ್’ ತಂತ್ರದ ಸಹಾಯದಿಂದ ಸ್ವಲ್ಪ ಸಮಯದಲ್ಲೇ ಯಶಸ್ವಿಯಾಗಿ ನಾಣ್ಯವನ್ನು ಹೊರತೆಗೆದಿದ್ದಾರೆ.