
ಮೈಸೂರು: ನಟ ಕಿಚ್ಚ ಸುದೀಪ್ ಪತ್ನಿಯೊಂದಿಗೆ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ತೆರಳಿ ತಾಯಿ ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.
ಇಂದು ಮೈಸೂರಿನಲ್ಲಿ ಸಿಸಿಎಲ್ ಕ್ರಿಕೆಟ್ ಪಂದ್ಯಾವಳಿ ನಡೆಯಲಿದ್ದು, ಪಂದ್ಯಕ್ಕೂ ಮುನ್ನ ಕಿಚ್ಚ ಸುದೀಪ್ ದಂಪತಿ ಹಾಗೂ ಸಿಸಿಎಲ್ ಕ್ರಿಕೆಟ್ ತಂಡದ ಆಟಗಾರರು ಚಾಮುಂಡು ಬೆಟ್ಟಕ್ಕೆ ತೆರಳಿ ಪೂಜೆ ಸಲ್ಲಿಸಿದರು.
ಇಂದು ಸಿಸಿಎಲ್-2025ರ ಮೊದಲ ಸೆಮಿಫೈನಲ್ ಮೈಸೂರಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಗ್ರೌಂಡ್ ನಲ್ಲಿ ನಡೆಯಲಿದೆ. ಮಧ್ಯಾಹ್ನ 2ಗಂಟೆಗೆ ಬೆಂಗಾಲ್ ಟೈಗರ್ಸ್ ಹಾಗೂ ಪಂಜಾಬ್ ಶೇರ್ ನಡುವೆ ಹಾಗೂ ಕರ್ನಾಟಕ ಬುಲ್ಡೋಜರ್ಸ್ ಹಾಗೂ ಚೆನ್ನೈ ತಂಡಗಳ ನಡುವೆ ಸಂಜೆ 6:30ಕ್ಕೆ ಪಂದ್ಯ ನಡೆಯಲಿದೆ.