ಭಾರತದಲ್ಲಿ ತನ್ನ ಮೊದಲ ಎಲೆಕ್ಟ್ರಿಕ್ ವಾಹನವನ್ನು ಬಿಡುಗಡೆ ಮಾಡಲು ತಯಾರಿ ನಡೆಸಿರುವ ಕಿಯಾ ಇಂಡಿಯಾ, ಹೊಸ ಇವಿ6 ಎಲೆಕ್ಟ್ರಿಕ್ ಕ್ರಾಸ್ ಓವರ್ ಕಾರಿನ ಬುಕಿಂಗ್ ಅನ್ನು ಆರಂಭಿಸಿದೆ.
ಗ್ರಾಹಕರು 3 ಲಕ್ಷ ರೂಪಾಯಿ ಮುಂಗಡ ಹಣವನ್ನು ಪಾವತಿಸಿ ಈ ಎಲೆಕ್ಟ್ರಿಕ್ ಕಾರನ್ನು ಬುಕ್ ಮಾಡಬಹುದಾಗಿದೆ. ದೇಶದ 12 ನಗರಗಳಲ್ಲಿ ಆಯ್ದ 15 ಡೀಲರ್ ಶಿಪ್ ಗಳಲ್ಲಿ ಈ ಕಾರನ್ನು ಮಾರಾಟ ಮಾಡಲಾಗುತ್ತದೆ.
ಗ್ರಾಹಕರು ಕಂಪನಿಯ ವೆಬ್ ಸೈಟ್ ಮೂಲಕವೂ ಆನ್ ಲೈನ್ ನಲ್ಲಿ ಇವಿ6 ಕಾರನ್ನು ಬುಕ್ ಮಾಡಬಹುದಾಗಿದೆ. ಕಾರು ಬುಕ್ ಮಾಡುವ ಪ್ರಕ್ರಿಯೆ ಜೂನ್ 2, 2022 ರ ವರೆಗೆ ಜಾರಿಯಲ್ಲಿರುತ್ತದೆ ಎಂದು ಕಂಪನಿ ತಿಳಿಸಿದೆ.
ಈ ಬಗ್ಗೆ ಮಾತನಾಡಿರುವ ಕಿಯಾ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಟಾಯ್ ಜಿನ್, ಭಾರತೀಯ ಆಟೋಮೋಟಿವ್ ಉದ್ಯಮವು ರೂಪಾಂತರಗೊಳ್ಳುತ್ತಿದೆ. ಈ ರೂಪಾಂತರ ಪ್ರಕ್ರಿಯೆಯಲ್ಲಿ ಕಿಯಾ ಮುಂಚೂಣಿಯಲ್ಲಿದೆ. ನಮ್ಮ ಹೊಸ ಇವಿ6 ಅನ್ನು ಭಾರತದಲ್ಲಿ ಬಿಡುಗಡೆ ಮಾಡುವ ಮೂಲಕ ಭಾರತೀಯರ ಅಗತ್ಯಗಳನ್ನು ಪೂರೈಸುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದ್ದೇವೆ ಎಂದಿದ್ದಾರೆ.
ಮನೆಮದ್ದಿನಿಂದಲೂ ಗುಣವಾಗುತ್ತೆ ʼಗಂಟಲು ನೋವುʼ
ಭಾರತದಲ್ಲಿ 2022 ರಲ್ಲಿ 100 ಇವಿ6 ಕಾರುಗಳನ್ನು ಬಿಡುಗಡೆ ಮಾಡಲಾಗುತ್ತಿದೆ. ಮೊದಲು ಬರುವ ಗ್ರಾಹಕರಿಗೆ ಮೊದಲ ಆದ್ಯತೆ ಮೇಲೆ ಕಾರನ್ನು ಮಾರಾಟ ಮಾಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಈ ಇವಿ6 ಅಲ್ಟ್ರಾ-ಫಾಸ್ಟ್ ಚಾರ್ಜಿಂಗ್ ವ್ಯವಸ್ಥೆ ಇದ್ದು, 350ಕೆಡಬ್ಲ್ಯೂ ಚಾರ್ಜರ್ ಅನ್ನು ಬಳಸಿಕೊಂಡು ಕೇವಲ 18 ನಿಮಿಷಗಳಲ್ಲಿ ಶೇ.10-80 ರಷ್ಟು ಚಾರ್ಜ್ ಆಗಲಿದೆ.