ಭಾರತೀಯ ಮತ್ತು ಜಾಗತಿಕ ಮಾರುಕಟ್ಟೆಗಳಿಗಾಗಿ ಕಿಯಾ ಇಂಡಿಯಾ ತನ್ನ ಕಾರೆನ್ಸ್ ಕಾರನ್ನು ಡಿಸೆಂಬರ್ 2021ರಲ್ಲಿ ಅನಾವರಣಗೊಳಿಸಿದೆ. ಈ ಕಾರು ಭಾರತದಲ್ಲಿ ಸೆಲ್ಟೋಸ್, ಕಾರ್ನಿವಲ್ ಮತ್ತು ಸೋನೆಟ್ ನಂತರ ದಕ್ಷಿಣ ಕೊರಿಯಾದ ಆಟೋ ದಿಗ್ಗಜನ ನಾಲ್ಕನೇ ಉತ್ಪನ್ನವಾಗಿದೆ.
ಕಿಯಾ ಕಾರೆನ್ಸ್ ಫೆಬ್ರವರಿ 15ರಂದು ಭಾರತೀಯ ಮಾರುಕಟ್ಟೆಯಲ್ಲಿ ಕಾಲಿಡಲಿದೆ. ಕಿಯಾ ಇಂಡಿಯಾ ನೀಡುವ ಎಲ್ಲಾ ಸಂಭಾವ್ಯ ಪವರ್‌ಟ್ರೇನ್ ಸಂಯೋಜನೆಗಳಿಗೆ ಅಧಿಕೃತವಾಗಿ ನೀಡಲಾದ ಇಂಧನ ಬಳಕೆಯ ಅಂಕಿಅಂಶಗಳನ್ನು ನಿಮಗೆ ತರುತ್ತೇವೆ.
ಕಿಯಾ ಕಾರೆನ್ಸ್ ಕಿಯಾ ಸೆಲ್ಟೋಸ್‌ಗೆ ಅಳವಡಿಸಲಾದ ಅದೇ ಇಂಜಿನ್ ಆಯ್ಕೆಯಿಂದ ಚಾಲಿತವಾಗಿದ್ದು, ಈ ಇಂಜಿನ್ 1.4-ಲೀಟರ್ ಟರ್ಬೊ ಪೆಟ್ರೋಲ್ ಚಾಲಿತವಾಗಿದ್ದು, 140 ಪಿಎಸ್ ಪವರ್ ಮತ್ತು 242 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. 1.5-ಲೀಟರ್ ಪೆಟ್ರೋಲ್ ಇಂಜಿನ್ 115 ಪಿಎಸ್ ಉತ್ಪಾದಿಸುತ್ತದೆ ಮತ್ತು 144 ಎನ್‌ಎಂ ಔಟ್‌ಪುಟ್ ಮತ್ತು 1.5-ಲೀಟರ್ ಟರ್ಬೊ ಡೀಸೆಲ್ ಎಂಜಿನ್ 115ಪಿಎಸ್ ಪವರ್ ಮತ್ತು 250ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ.
ಕೋವಿಡ್-19 ಲಸಿಕೆ ನೋಂದಣಿಗೆ ʼಆಧಾರ್ʼ ಕಡ್ಡಾಯವಲ್ಲ: ಸುಪ್ರೀಂಗೆ ಅಫಿಡವಿಟ್ ಕೊಟ್ಟ ಕೇಂದ್ರ
ಪೆಟ್ರೋಲ್ ಎಂಜಿನ್ ಅನ್ನು 6-ಸ್ಪೀಡ್ ಮ್ಯಾನ್ಯುವಲ್ ಗೇರ್ ವ್ಯವಸ್ಥೆಯೊಂದಿಗೆ ಮಾತ್ರ ಜೋಡಿಸಲಾಗಿದೆ ಆದರೆ ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು 6-ಸ್ಪೀಡ್ ಮ್ಯಾನ್ಯುವಲ್, ಮತ್ತು 7-ಸ್ಪೀಡ್ ಡಿಸಿಟಿ ಟ್ರಾನ್ಸ್‌ಮಿಷನ್ ಆಯ್ಕೆಯನ್ನೂ ನೀಡಲಾಗಿದೆ. ಡೀಸೆಲ್ ಇಂಜಿನ್ ಅನ್ನು 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಸ್ವಯಂ ಚಾಲಿತ ಟಾರ್ಕ್ ಪರಿವರ್ತಕದ ಆಯ್ಕೆಯೊಂದಿಗೆ ಕೊಡಲಾಗಿದೆ.
ಈಗ ಪವರ್‌ಟ್ರೇನ್‌ಗಳ ಪ್ರಕಾರ ಈ ಕಾರಿನ ಅಧಿಕೃತ ಇಂಧನ ದಕ್ಷತೆಯ ಅಂಕಿಅಂಶಗಳನ್ನು ನೋಡೋಣ. 6-ಸ್ಪೀಡ್ ಮ್ಯಾನುವಲ್‌ನಲ್ಲಿ ಮಾತ್ರ ಬರುವ 1.5-ಲೀಟರ್ ಪೆಟ್ರೋಲ್ ಇಂಜಿನ್ 15.7 ಕಿಮೀ/ಲೀ ಮೈಲೇಜ್ ನೀಡುತ್ತದೆ. ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ 1.4-ಲೀಟರ್ ಪೆಟ್ರೋಲ್ ಇಂಜಿನ್ 16.2 ಕಿಮೀ/ಲೀ ಮೈಲೇಜ್ ನೀಡುತ್ತದೆ. ಆದರೆ 7-ಸ್ಪೀಡ್ ಡಿಸಿಟಿ ಆವೃತ್ತಿಯು 16.5 ಕಿಮೀ/ಲೀ ಮೈಲೇಜ್ ನೀಡುತ್ತದೆ. ಕಾರೆನ್ಸ್‌ನ ಡೀಸೆಲ್ ಆವೃತ್ತಿಯು 21.3 ಕಿಮೀ/ಲೀ ಮತ್ತು ಸ್ವಯಂಚಾಲಿತವಾಗಿ 18.4 ಕಿಮೀ/ಲೀ ಮೈಲೇಜ್ ನೀಡುತ್ತದೆ ಎಂದು ಸದ್ಯದ ಮಟ್ಟಿಗೆ ಹೇಳಲಾಗುತ್ತಿದೆ.
ಕಿಯಾ ಕಾರೆನ್ಸ್ ಅನ್ನು 5 ಟ್ರಿಮ್ ಹಂತಗಳಲ್ಲಿ ಬರುತ್ತದೆ: ಪ್ರೀಮಿಯಂ, ಪ್ರೆಸ್ಟೀಜ್, ಪ್ರೆಸ್ಟೀಜ್ ಪ್ಲಸ್, ಲಕ್ಸೂರಿ ಮತ್ತು ಲಕ್ಸೂರಿ ಪ್ಲಸ್. ಮುಂದಿನ ಪೀಳಿಗೆಯ ಕಿಯಾ ಕನೆಕ್ಟ್‌ನೊಂದಿಗೆ 26.03 ಸೆಂ (10.25″) ಎಚ್‌ಡಿ ಟಚ್‌ಸ್ಕ್ರೀನ್ ನ್ಯಾವಿಗೇಶನ್, 8 ಸ್ಪೀಕರ್‌ಗಳೊಂದಿಗೆ ಬೋಸ್ ಪ್ರೀಮಿಯಂ ಸೌಂಡ್ ಸಿಸ್ಟಮ್ ಜೊತೆಗೆ ವೈರಸ್ ಮತ್ತು ಬ್ಯಾಕ್ಟೀರಿಯಾ ವಿರುದ್ಧ ರಕ್ಷಣೆ ಒದಗಿಸಲಾಗಿದೆ. ಇದರ ಜೊತೆಗೆ ಸ್ಮಾರ್ಟ್ ಏರ್ ಪ್ಯೂರಿಫೈಯರ್, ಸನ್ ರೂಫ್, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳಂತಹ ಅನೇಕ ಐಷಾರಾಮಿ ವೈಶಿಷ್ಟ್ಯಗಳನ್ನು ಕಿಯಾ ಕಾರೆನ್ಸ್ ಹೊಂದಿದೆ.
ಎನ್‌ಯುವಿ ಪ್ರೇರಿತವಾಗಿರುವ ಈ ಎಂಪಿವಿ ಎಂಟು ಬಣ್ಣದ ಆಯ್ಕೆಗಳಲ್ಲಿ ಬರುತ್ತದೆ — ಇಂಪೀರಿಯಲ್ ಬ್ಲೂ, ಮಾಸ್ ಬ್ರೌನ್, ಸ್ಪಾರ್ಕ್ಲಿಂಗ್ ಸಿಲ್ವರ್, ಇಂಟೆನ್ಸ್ ರೆಡ್, ಅರೋರಾ ಬ್ಲ್ಯಾಕ್ ಪರ್ಲ್, ಗ್ರಾವಿಟಿ ಗ್ರೇ, ಗ್ಲೇಸಿಯರ್ ವೈಟ್ ಪರ್ಲ್ ಮತ್ತು ಕ್ಲಿಯರ್ ವೈಟ್.
ಆರು ಏರ್‌ಬ್ಯಾಗ್‌ಗಳು, ಆಲ್ ವೀಲ್ ಡಿಸ್ಕ್ ಬ್ರೇಕ್‌ಗಳು, ಇಎಸ್‌ಸಿ, ಎಬಿಎಸ್ ಮತ್ತು ಇನ್ನಿತರ ಸುರಕ್ಷತಾ ಕ್ರಮಗಳನ್ನು ಒಳಗೊಂಡಿರುವ ದೃಢವಾದ 10 ಹೈ-ಸೇಫ್ಟಿ ಪ್ಯಾಕೇಜ್ ಹೊಂದಿರುವ ಕರೆನ್ಸ್‌ನ ಆರಂಭಿಕ ಬೆಲೆಯು 15-20 ಲಕ್ಷ ರೂ.ಗಳ ನಡುವೆ ಇರುವ ಸಾಧ್ಯತೆ ಇದೆ.