ಕಿಯಾ ಮೋಟಾರ್ಸ್ ಇಂಡಿಯಾ ಶೀಘ್ರದಲ್ಲೇ ಬಿಡುಗಡೆ ಮಾಡಲಿರುವ ಎಂಪಿವಿ ಕಿಯಾ ಕ್ಯಾರೆನ್ಸ್ ಗಾಗಿ ಬುಕಿಂಗ್ ಜನವರಿ 14ರಿಂದ ಶುರುವಾಗಲಿದೆ.
2022 ರಿಂದ ಪ್ರಾರಂಭವಾಗಲಿದೆ ಎಂದು ಘೋಷಿಸಿದೆ. ಎಂಪಿವಿ ಕಿಯಾ ಕ್ಯಾರೆನ್ಸ್, ಹ್ಯುಂಡೈ ಅಲ್ಕಾಜರ್, ಮಾರುತಿ ಸುಜುಕಿ ಎಕ್ಸ್ ಎಲ್ 6, ಟಾಟಾ ಸಫಾರಿ, ಟೊಯೊಟಾ ಇನ್ನೋವಾ ಕ್ರಿಸ್ಟಾ ಮತ್ತು ಮಹೀಂದ್ರಾ ಮರಾಜೊ ಮುಂತಾದ ಕಾರುಗಳೊಂದಿಗೆ ಟಕ್ಕರ್ ನೀಡಲಿದೆ.
ದಕ್ಷಿಣ ಭಾರತದ ಕಂಪನಿ ಕಿಯಾದ ಸೆಲ್ಟೋಸ್ ಮತ್ತು ಸಾನೆಟ್‌ನಂತಹ ಮಾಡೆಲ್ ಭಾರತದಲ್ಲಿ ಸಾಕಷ್ಟು ಜನಪ್ರಿಯವಾಗಿವೆ. ಕಂಪನಿ ಎಂಪಿವಿ ಕಿಯಾ ಕ್ಯಾರೆನ್ಸ್ ಜೊತೆ ಈ ಯಶಸ್ಸು ಮುಂದುವರಿಸುವ ಆಲೋಚನೆಯಲ್ಲಿದೆ. ಆಂಧ್ರಪ್ರದೇಶದ ಅನಂತಪುರ ಘಟಕದಲ್ಲಿ ಕಿಯಾ ಕ್ಯಾರೆನ್ಸ್ ನಿರ್ಮಾಣ ಕಾರ್ಯ ನಡೆಯುತ್ತಿದೆ.
ಕಿಯಾ ಕ್ಯಾರೆನ್ಸ್ ಪ್ರೀಮಿಯಂ ಎಸ್ಯುವಿಗಳ ಸ್ಟೈಲ್ ಹೊಂದಿದೆ. ಕಿಯಾ ಕ್ಯಾರೆನ್ಸ್ ಮುಂಭಾಗ ಆಕರ್ಷಕವಾಗಿದೆ. ಭಾರತದಲ್ಲಿ ಲಭ್ಯವಿರುವ ಇತರ ಮಾದರಿಗಳಿಗಿಂತ ಸಂಪೂರ್ಣ ಭಿನ್ನವಾಗಿದೆ. ಇದು ಎಲ್‌ಇಡಿ ಡೇಟೈಮ್ ರನ್ನಿಂಗ್ ಲೈಟ್‌ಗಳೊಂದಿಗೆ ದೊಡ್ಡ ಎಲ್‌ಇಡಿ ಹೆಡ್‌ಲ್ಯಾಂಪ್‌ಗಳು, ನಯವಾದ ಹ್ಯುಮಾನಿಟಿ ಲೈನ್, ಡೈಮಂಡ್-ಆಕಾರದ ಮೆಶ್‌ನೊಂದಿಗೆ ದೊಡ್ಡ ಮುಂಭಾಗದ ಗ್ರಿಲ್ ಮತ್ತು ಲಂಬವಾದ ಸ್ಲಾಟೆಡ್ ಎಲ್‌ಇಡಿ ಫಾಗ್ ಲ್ಯಾಂಪ್ ಹೊಂದಿದೆ.
ಇದ್ರಲ್ಲಿ ಸುರಕ್ಷತೆಗೂ ಹೆಚ್ಚು ಮಹತ್ವ ನೀಡಲಾಗಿದೆ. ಆರು ಏರ್‌ಬ್ಯಾಗ್‌ಗಳು, ಎಬಿಎಸ್, ಇಎಸ್ಸಿ, ಎಚ್ ಎಸಿ, ವಿಎಸ್ಎಂ ಡಿಬಿಸಿ, ಬಿಎಎಸ್, ಆಲ್-ವೀಲ್ ಡಿಸ್ಕ್ ಬ್ರೇಕ್, ಹಿಂಭಾಗದ ಪಾರ್ಕಿಂಗ್ ಸಂವೇದಕಗಳಂತಹ ಸುರಕ್ಷತಾ ವೈಶಿಷ್ಟ್ಯಗಳನ್ನು ನೀಡಲಾಗಿದೆ. ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆ ನೀಡಲಾಗಿದೆ.