ಧಾರವಾಡ : ಖತರ್ ನಾಕ್ ಖದೀಮನೋರ್ವ ಮದುವೆ ಮಂಟಪದಿಂದಲೇ 35 ಲಕ್ಷದ ಚಿನ್ನಾಭರಣ ಕದ್ದೊಯ್ದ ಘಟನೆ ನಡೆದಿದ್ದು, ಪೊಲೀಸರು ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ.
ಧಾರವಾಡದ ಸ್ಟಾರ್ ದಿ ಓಸಿಯನ್ ಹೋಟೆಲ್ ನಲ್ಲಿ ಮದುವೆ ಸಮಾರಂಭ ನಡೆಯುತ್ತಿತ್ತು. ಧಾರವಾಡದ ಗಂಗಾಧರಪ್ಪ ಪಟ್ಟಣಶೆಟ್ಟಿ ಎಂಬುವವರ ಪುತ್ರ ಶರಣಪ್ಪ ಅವರ ಜೊತೆಗೆ ಹುಬ್ಬಳ್ಳಿಯ ಅರುಣ್ ಕುಮಾರ್ ಪುತ್ರಿ ಡಾ.ಪೂಜಾ ವಿವಾಹ ನಡೆಯುತಿತ್ತು. ಈ ವೇಳೆ ಮದುವೆ ಮಂಟಪಕ್ಕೆ ನುಗ್ಗಿದ ಖದೀಮನೋರ್ವ ಚಿನ್ನಾಭರಣ ಎಗರಿಸಿದ್ದಾನೆ.ಈ ಬಗ್ಗೆ ವಿದ್ಯಾಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಖದೀಮನ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.