ಬೆಂಗಳೂರು : ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರೂ ಹಣ ವಂಚಿಸಿದ ಖತರ್ನಾಕ್ ಜೋಡಿಗಳನ್ನು ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.
ಪ್ರಕಾಶ್ ಹಾಗೂ ಮಧು ಎಂಬ ದಂಪತಿಗಳು ಈ ಕೃತ್ಯ ಎಸಗಿದ್ದಾರೆ,ನಮಗೆ ಅವರು ಗೊತ್ತು, ಇವರು ಗೊತ್ತು. ಆ ಇಲಾಖೆಯವರು ಪರಿಚಯವಿದೆ ಎಂದು ಯುವಕರನ್ನು ಸೆಳೆದು ಹಣ ಪಡೆದು ವಂಚಿಸುತ್ತಿದ್ದರು.
ದಂಪತಿಗಳು 6 ಲಕ್ಷ ಹಣ ವಂಚಿಸಿದ್ದಾರೆ ಎಂದು ವಿದ್ಯಾರಣ್ಯಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು, ನಂತರ ತನಿಖೆ ನಡೆಸಿದ ಪೊಲೀಸರು ವಿಚಾರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ ಪೊಲೀಸರು 2 ಲಕ್ಷ ಹಣ, 4 ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.