ಪಾನೀಯಗಳನ್ನು ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದು. ಇಲ್ಲಿ ರಾಗಿ ಮಾಲ್ಟ್ ಮಾಡುವ ವಿಧಾನ ಇದೆ. ಇದು ತೂಕ ಇಳಿಸಿಕೊಳ್ಳುವವರಿಗೂ ಸಹಾಯಕಾರಿ. ಒಂದು ಗ್ಲಾಸ್ ಕುಡಿದರೆ ಹೊಟ್ಟೆ ತುಂಬುತ್ತದೆ.
ರಾಗಿ ಹಿಟ್ಟು-ಅರ್ಧ ಕಪ್, ಹಾಲು-2 ಕಪ್, ಬೆಲ್ಲ-3 ಟೇಬಲ್ ಸ್ಪೂನ್, ಖರ್ಜೂರ-8, ಬಾದಾಮಿ ಹಾಗೂ ಗೋಡಂಬಿ-ಸ್ವಲ್ಪ, (ಚಿಕ್ಕದಾಗಿ ಕತ್ತರಿಸಿಕೊಳ್ಳಿ), ಏಲಕ್ಕಿ ಪುಡಿ- ¼ ಟೀ ಸ್ಪೂನ್, ನೀರು-2 ½ ಕಪ್.
ಮೊದಲಿಗೆ ಹಾಲನ್ನು ಕುದಿಸಿಕೊಳ್ಳಿ. ಇದರಲ್ಲಿ ½ ಕಪ್ ಹಾಲು ತೆಗೆದುಕೊಂಡು ಅದಕ್ಕೆ ಖರ್ಜೂರ ಹಾಕಿ ಸ್ವಲ್ಪ ಹೊತ್ತು ಹಾಗೇ ಬಿಡಿ. ಇನ್ನೊಂದು ಬೌಲ್ ಗೆ ರಾಗಿ ಹಿಟ್ಟು ಹಾಕಿ ಅದಕ್ಕೆ ½ ಕಪ್ ನೀರು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಹಾಲಿನಲ್ಲಿ ನೆನೆಸಿಟ್ಟ ಖರ್ಜೂರವನ್ನು ಮಿಕ್ಸಿಯಲ್ಲಿ ರುಬ್ಬಿಕೊಂಡು ಒಂದು ಬೌಲ್ ಗೆ ತೆಗೆದುಕೊಂಡು ಇಡಿ.
ಒಂದು ಪ್ಯಾನ್ ಗೆ ರಾಗಿ ಹಿಟ್ಟಿನ ಮಿಶ್ರಣ ಹಾಗೂ 2 ಕಪ್ ನೀರು ಹಾಕಿ ಹದ ಉರಿಯಲ್ಲಿ ಬೇಯಿಸಿಕೊಳ್ಳಿ. ಗಂಟುಗಳಾಗದಂತೆ ತಿರುವುತ್ತಾ ಇರಿ. ಇದು ಬೇಯುತ್ತಿದ್ದಂತೆ ಬೆಲ್ಲ, ರುಬ್ಬಿಕೊಂಡ ಖರ್ಜೂರದ ಮಿಶ್ರಣ, ಕಾಯಿಸಿಕೊಂಡ ಹಾಲು ಹಾಕಿ ಇದು ದಪ್ಪಗಿನ ಮಿಶ್ರಣ ಆಗುವವರಗೆ ಮಿಕ್ಸ್ ಮಾಡಿ. ನಿಮಗೆ ತುಂಬಾ ದಪ್ಪಗಿನ ಮಿಶ್ರಣ ಇಷ್ಟವಿಲ್ಲದಿದ್ದರೆ ತುಸು ಹಾಲು ಸೇರಿಸಿಕೊಳ್ಳಿ. ಕೊನೆಗೆ ಏಲಕ್ಕಿ ಪುಡಿ, ಕತ್ತರಿಸಿಕೊಂಡ ಗೋಡಂಬಿ, ಬಾದಾಮಿ ಹಾಕಿ ಗ್ಯಾಸ್ ಆಫ್ ಮಾಡಿ.