ಬೆಳಗಾವಿ: ಬಿಜೆಪಿ ಎಂಎಲ್ ಸಿ ಸಿ.ಟಿ.ರವಿ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲ ತಲೆದಂದವಾಗಿದ್ದು, ಬೆಳಗಾವಿಯ ಖಾನಾಪುರ ಪೊಲೀಸ್ ಠಾಣೆಯ ಸಿಪಿಐ ಮಂಜುನಾಥ್ ಅವರನ್ನು ಅಮಾನತು ಮಾಡಲಾಗಿದೆ. ಸಿಪಿಐ ಅಮಾನತಿಗೆ ತೀವ್ರ ಖಂಡನೆ ವ್ಯಕ್ತವಾಗಿದ್ದು, ನಾಳೆ ವಿವಿಧ ಸಂಘಟನೆಗಳು ಖಾನಾಪುರ ಬಂದ್ ಗೆ ಕರೆ ನೀಡಿವೆ.
ಸಿಪಿಐ ಮಂಜುನಾಥ್ ಅಮಾನತು ಕ್ರಮ ಖಂಡಿಸಿ ನಾಳೆ ಕನ್ನಡಪರ ಸಂಘಟನೆಗಳು ಖಾನಾಪುರ ಬಂದ್ ಗೆ ಕರೆ ನೀಡಿದ್ದು, ಬಂದ್ ಗೆ ವಿವಿಧ ಸಂಘಟನೆಗಳು ಬೆಂಬಲ ಘೋಷಿಸಿವೆ. ಇದೇ ವೇಳೆ ಖಾನಾಪುರ ಬಂದ್ ಕರೆಗೆ ಬಿಜೆಪಿ ಹಾಗೂ ಜೆಡಿಎಸ್ ಕೂಡ ಬೆಂಬಲ ವ್ಯಕ್ತಪಡಿಸಿವೆ.
ನಾಳೆ ಖಾನಾಪುರ ಬಂದ್ ಪ್ರತಿಭಟನೆ ನಡೆಯಲಿದ್ದು, ಸಿಪಿಐ ಮಂಜುನಾಥ್ ಅಮಾನತು ಆದೇಶ ಹಿಂಪಡೆಯುವಂತೆ ಸಂಘಟನೆಗಳು ಒತ್ತಾಯಿಸಲಿವೆ.
ಸಿ.ಟಿ.ರವಿ ಬಂಧನ ಸಂದರ್ಭದಲ್ಲಿ ಖಾನಾಪುರ ಠಾಣೆಯೊಳಗೆ ಬಿಜೆಪಿ ನಾಯಕರನ್ನು ಬಿಟ್ಟಿದ್ದಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳ ಆದೇಶ ಉಲ್ಲಂಘನೆ, ಕರ್ತವ್ಯ ಲೋಪ ಆರೋಪದಲ್ಲಿ ಐಜಿಪಿ ವಿಕಾಸ್ ಕುಮಾರ್ ಸಿಪಿಐ ಮಂಜುನಾಥ್ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದರು.