alex Certify ಅಫ್ಘಾನಿಸ್ತಾನ ಅಧ್ಯಕ್ಷೀಯ ಅರಮನೆಯಲ್ಲಿ ಗುಂಡಿನ ಚಕಮಕಿಗೂ ಮುನ್ನ ನಡೆದಿತ್ತು ನಾಟಕೀಯ ಬೆಳವಣಿಗೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಫ್ಘಾನಿಸ್ತಾನ ಅಧ್ಯಕ್ಷೀಯ ಅರಮನೆಯಲ್ಲಿ ಗುಂಡಿನ ಚಕಮಕಿಗೂ ಮುನ್ನ ನಡೆದಿತ್ತು ನಾಟಕೀಯ ಬೆಳವಣಿಗೆ

ತಾಲಿಬಾನ್​​ ಸಹ ಸಂಸ್ಥಾಪಕ ಹಾಗೂ ಅಫ್ಘಾನಿಸ್ತಾನದ ಉಪ ಪ್ರಧಾನಿ ಮುಲ್ಲಾ ಅಬ್ದುಲ್​ ಘನಿ ಬರಾದಾರ್​ಗೆ ಹಕ್ಕಾನಿ ನೆಟ್​​ವರ್ಕ್​ನ ಪ್ರಮುಖ ನಾಯಕ ಹೊಡೆದಿದ್ದು, ಇದೇ ಕಾರಣಕ್ಕೆ ಕಾಬೂಲ್​ನ ಅಧ್ಯಕ್ಷೀಯ ಸ್ಥಳದಲ್ಲಿ ಗುಂಡಿನ ಚಕಮಕಿ ಉಂಟಾಗಿದೆ ಎಂದು ತಿಳಿದುಬಂದಿದೆ.

ತಾಲಿಬಾನ್​ ಸಹ ಸಂಸ್ಥಾಪಕ ಮುಲ್ಲಾ ಅಬ್ದುಲ್​ ಘನಿ ಬರಾದಾರ್​ ಅಧ್ಯಕ್ಷೀಯ ಅರಮನೆಯಲ್ಲಿ ಸಂಪುಟದ ಬಗ್ಗೆ ಚರ್ಚೆ ನಡೆಸುತ್ತಿದ್ದರು. ಚರ್ಚೆ ಕಾವೇರುತ್ತಿದ್ದಂತೆಯೇ ಹಕ್ಕಾನಿ ನೆಟ್​ವರ್ಕ್​ನ ಪ್ರಮುಖ ನಾಯಕ ಖಲಿಲ್​ ಉಲ್​ ರೆಹಮಾನ್​ ಹಕ್ಕಾನಿ ತಮ್ಮ ಖುರ್ಚಿಯಿಂದ ಎದ್ದು ಬರಾದಾರ್​ಗೆ ಥಳಿಸಿದ್ದಾರೆ ಎಂದು ಬ್ಲೂಮ್​ಬರ್ಗ್ ವರದಿ ಮಾಡಿದೆ.

ಕೆಲವೇ ನಿಮಿಷಗಳಲ್ಲಿ ಎರಡೂ ನೆಟ್​ವರ್ಕ್​ನ ಅಂಗರಕ್ಷಕರು ಬಂದೂಕನ್ನು ಹೊರತೆಗೆದರು ಹಾಗೂ ಗುಂಡಿನ ಸುರಿಮಳೆಯನ್ನೇ ಶುರುವಿಟ್ಟರು. ಇದು ಕೆಲವರ ಸಾವಿಗೆ ಹಾಗೂ ಗಾಯಕ್ಕೆ ಕಾರಣವಾಗಿದೆ ಎನ್ನಲಾಗಿದೆ.

ಅಧ್ಯಕ್ಷೀಯ ನಿವಾಸದಲ್ಲಿ ಉಂಟಾದ ಈ ಗುಂಡಿನ ಚಕಮಕಿಯಲ್ಲಿ ಬರಾದಾರ್ ಸಾವಿಗೀಡಾಗಿದ್ದಾರೆ ಎಂಬ ವದಂತಿ ವ್ಯಾಪಕವಾಗಿ ಹರಿದಾಡಿತ್ತು.

ಆದರೆ ಈ ಘಟನೆಯಲ್ಲಿ ಬರಾದಾರ್ ಸಾಯುವುದು ಹಾಗಿರಲಿ ಗಾಯಗೊಂಡಿರಲೂ ಇಲ್ಲ. ಇದಾದ ಬಳಿಕ ಅವರು ಕೆಲ ಸಮಯ ಸಾರ್ವಜನಿಕ ಪ್ರದೇಶಗಳಲ್ಲಿ ಕಾಣಿಸಿಕೊಂಡಿರಲಿಲ್ಲ.

ಆದರೆ ಬರಾದಾರ್​ ಸಾವಿನ ವದಂತಿ ಹೆಚ್ಚುತ್ತಿದ್ದಂತೆಯೇ ತಾಲಿಬಾನ್​ ನಾಯಕ ತಾನು ಸತ್ತಿಲ್ಲ ಬದುಕಿದ್ದೇನೆ ಎಂದು ಆಡಿಯೋ ನೋಟ್​ ರಿಲೀಸ್​ ಮಾಡಿ ಸ್ಪಷ್ಟನೆ ನೀಡಿದ್ದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...