ಬೆಂಗಳೂರು: ಬಿಪಿಎಲ್ ಕಾರ್ಡ್ ಮಾನದಂಡ ಉಲ್ಲಂಘಿಸಿ ಅನೇಕರು ಬಿಪಿಎಲ್ ಕಾರ್ಡ್ ಪಡೆದುಕೊಂಡಿದ್ದು, ಇಂತಹ ಕಾರ್ಡ್ ಗಳನ್ನು ರದ್ದು ಮಾಡಲಾಗಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಕೆ.ಹೆಚ್. ಮುನಿಯಪ್ಪ ತಿಳಿಸಿದ್ದಾರೆ.
ಮುಂದೆಯೂ ಅನರ್ಹ ಕಾರ್ಡ್ ಗಳ ಕುರಿತು ತನಿಖೆ ನಡೆಸಲಾಗುವುದು ಎಂದು ಮಾಹಿತಿ ನೀಡಿದ್ದು, ವೈಟ್ ಬೋರ್ಡ್ ಕಾರ್ ಹೊಂದಿದವರು ಬಿಪಿಎಲ್ ಕಾರ್ಡ್ ಪಡೆದುಕೊಳ್ಳಲು ಅರ್ಹರಲ್ಲ. 2016 ರಲ್ಲಿ ಬಿಪಿಎಲ್ ಕಾರ್ಡ್ ಪಡೆಯಲು ಮಾನದಂಡ ನಿಗದಿಪಡಿಸಲಾಗಿದೆ. ಈ ಮಾನದಂಡದ ಅನ್ವಯ ವಾಣಿಜ್ಯ ಬಳಕೆಗೆ ತ್ರಿಚಕ್ರ ವಾಹನ ಅಥವಾ ಯೆಲ್ಲೋ ಬೋರ್ಡ್ ಕಾರ್ ಹೊಂದಿದವರಿಗೆ ಬಿಪಿಎಲ್ ಕಾರ್ಡ್ ನೀಡಬಹುದು ಎಂದರು.
ಜೀವನಾಧಾರಕ್ಕೆ ಕಾರ್ ಹೊಂದುವುದು ಬಿಪಿಎಲ್ ಮಾನದಂಡ ಉಲ್ಲಂಘನೆಯಲ್ಲ. ಯೆಲ್ಲೋ ಬೋರ್ಡ್ ಕಾರ್ ಹೊಂದಿದ ಕಾರಣಕ್ಕೆ ಬಿಪಿಎಲ್ ಕಾರ್ಡ್ ರದ್ದಾಗಿದ್ದರೆ ಅವುಗಳನ್ನು ಪುನರ್ ಪರಿಶೀಲನೆ ಮಾಡಲಾಗುವುದು. ವೈಟ್ ಬೋರ್ಡ್ ಇದ್ದರೆ ಬಿಪಿಎಲ್ ಅಲ್ಲ ಎಂದು ಹೇಳಿದ್ದಾರೆ.