ಕೋಲಾರ: ಚಿನ್ನದ ಗಣಿ ಹೋರಾಟಕ್ಕಾಗಿ ಸಿಪಿಐ ಪಕ್ಷದಿಂದ ನಿಧಿ ಸಂಗ್ರಹಿಸಲಾಗಿದೆ. ಕೋಲಾರ ಜಿಲ್ಲೆ ಕೆಜಿಎಫ್ ಎಂಜಿ ಮಾರುಕಟ್ಟೆಯಲ್ಲಿ ನಿಧಿ ಸಂಗ್ರಹಿಸಲಾಗಿದೆ.
ಗಣಿ ಕಾರ್ಮಿಕರ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿ ದೆಹಲಿ ಚಲೋ ಹಮ್ಮಿಕೊಳ್ಳಲಾಗಿದೆ. ಡಿಸೆಂಬರ್ 14ರಂದು ಚಿನ್ನದ ಗಣಿ ಕಾರ್ಮಿಕರಿಂದ ದೆಹಲಿ ಚಲೋ ಹಮ್ಮಿಕೊಳ್ಳಲಾಗಿದೆ.
ಗಣಿ ಕಾರ್ಮಿಕರ ಬಾಕಿ 52 ಕೋಟಿ ರೂ. ನಿವೃತ್ತಿ ವೇತನ ಬಿಡುಗಡೆ ಮಾಡುವಂತೆ ಒತ್ತಾಯಿಸಲಾಗುವುದು. ಚಿನ್ನದ ಗಣಿ ಕಾರ್ಮಿಕರಿಗೆ ಮನೆಗಳನ್ನು ಬಿಟ್ಟು ಕೊಡುವುದು, ಪರ್ಯಾಯ ಉದ್ಯೋಗ ಸೃಷ್ಟಿಗೆ ಒತ್ತಾಯಿಸಿ ದೆಹಲಿ ಚಲೋ ಹಮ್ಮಿಕೊಳ್ಳಲಾಗಿದೆ.