ದೇಶದ ಅತ್ಯಂತ ಹಳೆಯ ಚಿನ್ನದ ಗಣಿ ಕೆಜಿಎಫ್ ನಲ್ಲಿ 50 ದಶಲಕ್ಷ ಟನ್ ಸಂಸ್ಕರಿಸಿದ ಅದಿರಿನಿಂದ ಚಿನ್ನ ಹೊರ ತೆಗೆಯುವ ಸಲುವಾಗಿ ಭಾರತ, ಬಿಡ್ ಗಳನ್ನು ಆಹ್ವಾನಿಸಲು ನಿರ್ಧರಿಸಿದೆ.
ಹಿರಿಯ ಅಧಿಕಾರಿಯೊಬ್ಬರು ಈ ಕುರಿತಂತೆ ಮಾಹಿತಿ ನೀಡಿದ್ದು, 18,000 ಕೋಟಿ ಡಾಲರ್ ಮೌಲ್ಯದ ಚಿನ್ನದ ನಿಕ್ಷೇಪಗಳನ್ನು ಇದು ಒಳಗೊಂಡಿದೆ. ಸಂಸ್ಕರಿಸಿದ ಅದಿರಿನ ಉಳಿದ ಭಾಗಗಳಿಂದಲೂ ಚಿನ್ನ ಹೊರ ತೆಗೆಯಬಹುದಾಗಿದ್ದು, ಹೀಗಾಗಿ ಈ ತೀರ್ಮಾನಕ್ಕೆ ಬರಲಾಗಿದೆ.
ಬ್ರಿಟಿಷ್ ಆಳ್ವಿಕೆ ಕಾಲದಿಂದಲೂ ಕೆಜಿಎಫ್ ನಲ್ಲಿ ಚಿನ್ನದ ಗಣಿಗಾರಿಕೆ ನಡೆದುಕೊಂಡು ಬಂದಿದ್ದು, 20 ವರ್ಷಗಳ ಹಿಂದೆ ಇದನ್ನು ಸ್ಥಗಿತಗೊಳಿಸಲಾಗಿತ್ತು. ಇದೀಗ ಸಂಸ್ಕರಿಸಿದ ಅದಿರಿನಿಂದ ಚಿನ್ನ ಹೊರ ತೆಗೆಯಲು ಬಿಡ್ ಆಹ್ವಾನಿಸಲಾಗುತ್ತಿದೆ ಎಂದು ಹೇಳಲಾಗಿದೆ.