
ಕುಸ್ತಿಯಲ್ಲಿ ಚಿನ್ನದ ಪದಕ ಬೇಟೆಯಾಡಿರುವ ಪ್ರಿಯಾ ಮಲಿಕ್ ಅವರಿಗೆ ಅಭಿನಂದನೆ ಸಲ್ಲಿಸಲು ಹೋಗಿ ಕೆ.ಎಫ್.ಸಿ. ಇಂಡಿಯಾ ಪೇಚಿಗೆ ಸಿಲುಕಿದೆ.
ಟ್ವಿಟ್ಟರ್ ಮುಖಾಂತರ ಪ್ರಿಯಾ ಮಲ್ಲಿಕ್ ಅವರಿಗೆ ಕೆ.ಎಫ್.ಸಿ ಅಭಿನಂದನೆ ಸಲ್ಲಿಸಿದೆ. ಆದರೆ ತಪ್ಪಿನಿಂದ ನಟಿ ಹಾಗೂ ಕವಿಯಾಗಿರುವ ಪ್ರಿಯಾ ಮಲಿಕ್ ಅವರಿಗೆ ಟ್ಯಾಗ್ ಮಾಡಲಾಗಿದೆ.
ಆದರೆ ಕವಿಯಿತ್ರಿ ಪ್ರಿಯಾ ಮಲಿಕ್ ಕೋಪಗೊಳ್ಳದೆ ನಗುತ್ತಲೇ ಪ್ರತಿಕ್ರಿಯೆ ನೀಡಿದ್ದಾರೆ.
ಶೀಘ್ರದಲ್ಲೇ ಬಿಡುಗಡೆ ದಿನಾಂಕವನ್ನು ಘೋಷಿಸಲಿದ್ದಾರೆ ‘ವಿಂಡೋ ಸೀಟ್’ ಚಿತ್ರತಂಡ
‘’ನಾನು ಚಿನ್ನವನ್ನು ಮಾತ್ರ ಧರಿಸುತ್ತೇನೆ ಹಾಗೂ ನಾನು ಯಾವಾಗಲೂ ಹಸಿದಿದ್ದೇನೆ, ತಪ್ಪಾದ ಟ್ಯಾಗ್’’ ಎಂದು ಕವಿಯಿತ್ರಿ ನಗುತ್ತಾ ಉತ್ತರಿಸಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ಅವರು, ತಮ್ಮ ಕವನದ ಸಾಲುಗಳನ್ನು ಬರೆದು ಮತ್ತಷ್ಟು ಟ್ವೀಟ್ ಪೋಸ್ಟ್ ಮಾಡಿದ್ದಾರೆ. ಈ ಕವಿತೆಯಲ್ಲಿ ಆಧುನಿಕ ಕಾಲದಲ್ಲಿ ಹಳೆಯ ಶಾಲಾ ಪ್ರಣಯವನ್ನು ಹುಡುಕುವ ಬಗ್ಗೆ ಹೇಳುತ್ತದೆ. ಅಲ್ಲದೆ ‘’ಕುಸ್ತಿಯ ಯುಗದಲ್ಲಿ, ನೀವು ಕಾವ್ಯದ ಮೇಲೆ ಬಂದಿದ್ದೀರಿ’’ ಅಂತೆಲ್ಲಾ ಟ್ವೀಟ್ ಮಾಡಿದ್ದಾರೆ.
ಮತ್ತೂ ಮುಂದುವರಿದು, ‘ಮನೆಯಲ್ಲಿ ಗಂಡನ ಜೊತೆ ಜಗಳವಾದಾಗಲೆಲ್ಲಾ ನಾನು ಚಿನ್ನ ಗೆಲ್ಲುತ್ತೇನೆ’ ಎಂದು ಹಾಸ್ಯದ ಟ್ವೀಟ್ ಮಾಡಿದ್ದಾರೆ. ಇದನ್ನು ನೋಡಿದ ನೆಟ್ಟಿಗರು ಕೆ.ಎಫ್.ಸಿ.ಯನ್ನು ಟ್ರೋಲ್ ಮಾಡಿದ್ದಾರೆ. ಬಳಿಕ ಕೆ.ಎಫ್.ಸಿ. ತಮ್ಮ ತಪ್ಪಾದ ಟ್ವೀಟ್ ನ್ನು ಡಿಲೀಟ್ ಮಾಡಿದೆ.