ಬೆಂಗಳೂರು : ಜೂ.10ರಿಂದ ವಿಕಲಚೇತನರಿಗೆ ವೈದ್ಯಕೀಯ ತಪಾಸಣೆ ವೈದ್ಯಕೀಯ ಎಂಜಿನಿಯರಿಂಗ್ ಸೇರಿದಂತೆ ಇತರ ವೃತ್ತಿಪರ ಕೋರ್ಸ್ಗಳಿಗೆ ವಿಕಲಚೇತನಾ ಕೋಟಾದಲ್ಲಿ ಮೀಸಲಾತಿ ಕ್ಲೇಮ್ ಮಾಡಿರುವ ಅಭ್ಯರ್ಥಿಗಳಿಗೆ ಜೂನ್ 10- 12ರವರೆಗೆ ವೈದ್ಯಕೀಯ ತಪಾಸಣೆಯನ್ನು ಕೆಇಎ ಕಚೇರಿಯಲ್ಲಿ ಆಯೋಜಿಸಲಾಗಿದೆ. ಅರ್ಹರು ಹಾಜರಾಗಬೇಕು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಕಟಣೆ ಹೊರಡಿಸಿದೆ.
ವೈದ್ಯಕೀಯ ತಪಾಸಣೆಗೆ ಹಾಜರಾಗಬೇಕಾದ ಅಭ್ಯರ್ಥಿಗಳ ಪಟ್ಟಿ ಇಂಜಿನಿಯರಿಂಗ್, ಯೋಗ ಮತ್ತು ನ್ಯಾಚುರೋಪತಿ, ಪಶು ವೈದ್ಯಕೀಯ ಮತ್ತು ಪಶುಸಂಗೋಪನೆ, ಕೃಷಿ ವಿಜ್ಞಾನ ಕೋರ್ಸುಗಳು, [ಬಿ.ಎಸ್.ಸಿ (ಆನರ್ಸ್) ಕೃಷಿ, ಬಿ.ಎಸ್.ಸಿ (ಆನರ್ಸ್) (ರೇಷ್ಮೆ ಕೃಷಿ) ಮುಂತಾದ], [ಬಿ.ಎಸ್.ಸಿ (ನರ್ಸಿಂಗ್) ಬಿ.ಫಾರ್ಮ, 2ನೇ ವರ್ಷದ ಬಿ-ಫಾರ್ಮ ಮತ್ತು ಫಾರ್ಮಾ-ಡಿ, ವೈದ್ಯಕೀಯ, ದಂತ ವೈದ್ಯಕೀಯ, ಆರ್ಯುವೇದ, ಯುನಾನಿ, ಹೋಮಿಯೋಪತಿ, ಆರ್ಕಿಟೆಕ್ಟರ್, ಬಿಪಿಟಿ, ಬಿಪಿಒ, ಬಿಎಸ್ಸಿ ಅಲೈಡ್ ಹೆಲ್ತ್ ಸೈನ್ಸ್ ಕೋರ್ಸುಗಳಿಗೆ ವಿಕಲಚೇತನ ಕೋಟದ ಅಡಿಯಲ್ಲಿ ಸೀಟು ಪಡೆಯಲು ಯುಜಿಸಿಇಟಿ-2024 ಆನ್ಲೈನ್ ಅರ್ಜಿಯಲ್ಲಿ ಮೀಸಲಾತಿ ಕ್ಷೇಮ್ ಮಾಡಿರುವ ಅಭ್ಯರ್ಥಿಗಳಿಗೆ ಅಂಗವಿಕಲತೆ ಅರ್ಹತೆಯನ್ನು ಪರೀಕ್ಷಿಸಲು ದಿನಾಂಕ 10-06-2024, 11-06-2024 ಮತ್ತು 12-06-2024 ರಂದು ವೈದ್ಯರ ಸಮಿತಿಯಿಂದ ವೈದ್ಯಕೀಯ ತಪಾಸಣೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ, ಬೆಂಗಳೂರು ಇಲ್ಲಿ ನಡೆಸಲಾಗುವುದು.
ವೈದ್ಯಕೀಯ ತಪಾಸಣೆಗೆ ಹಾಜರಾಗಬೇಕಾದ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಾಧಿಕಾರದ ವೆಬ್ ಸೈಟ್ನಲ್ಲಿ ಪ್ರಕಟಿಸಲಾಗಿದೆ. ಅಭ್ಯರ್ಥಿಗಳು ಅವರುಗಳ ಹೆಸರಿನ ಮುಂದೆ ನಿಗದಿಪಡಿಸಿರುವ ದಿನಾಂಕಗಳಂದು ವೈದ್ಯಕೀಯ ತಪಾಸಣೆಗೆ ಹಾಜರಾಗಬೇಕು. ದೈಹಿಕ ವಿಕಲಚೇತನದ ವಿಶೇಷ ಪ್ರವರ್ಗದ ಕೋಟಾದ ಅಡಿಯಲ್ಲಿ ಸೀಟನ್ನು ಕೋರುವ ವಿದ್ಯಾರ್ಥಿಗಳು, ಬೆಂಗಳೂರಿನ ಕ.ಪ.ಪ್ರಾದ ಕಚೇರಿಯಲ್ಲಿ ನಡೆಸುವ ವೈದ್ಯಕೀಯ ಪರೀಕ್ಷೆಗೆ ಕಡ್ಡಾಯವಾಗಿ ಹಾಜರಾಗಬೇಕಿರುತ್ತದೆ. ವೈದ್ಯಕೀಯ ಸಮಿತಿಯು ಪರಿಶೀಲಿಸಿ ನೀಡುವ ವಿಕಲಚೇತನರ ಆರ್ಹತೆ ವಿಷಯದಲ್ಲಿ ವೈದ್ಯಕೀಯ ಸಮಿತಿಯ ನಿರ್ಧಾರವೇ ಅಂತಿಮವಾಗಿರುತ್ತದೆ.
ವೈದ್ಯಕೀಯ ತಪಾಸಣೆಯಲ್ಲಿ ನಿಯಮಾನುಸಾರ ಅರ್ಹತೆ ಪಡೆಯುವ ಅಭ್ಯರ್ಥಿಗಳು ಮಾತ್ರ ಆಯಾ ಕೋರ್ಸುಗಳಿಗೆ ನಿಗದಿಪಡಿಸಲಾದ ವಿಕಲಚೇತನ ಕೋಟದ ಅಡಿಯಲ್ಲಿ ಸೀಟು ಪಡೆಯಲು ಪರಿಗಣಿಸಲಾಗುವುದು.
ವೈದ್ಯಕೀಯ ಪರೀಕ್ಷೆಗೆ ಅಭ್ಯರ್ಥಿಗಳು ಕಡ್ಡಾಯವಾಗಿ ಈ ಕೆಳಗಿನ ದಾಖಲೆಗಳನ್ನು ಸಲ್ಲಿಸಬೇಕು.
1. ಯುಜಿಸಿಇಟಿ-2024ಕ್ಕೆ ಭರ್ತಿ ಮಾಡಿ ಅಂತಿಮವಾಗಿ ಸಲ್ಲಿಸಿರುವ ಪ್ರತಿ.
2. ಯುಜಿಸಿಇಟಿ-2024 ರ ಮೂಲ ಪ್ರವೇಶ ಪತ್ರ
3. ಮಾನ್ಯತೆ ಇರುವ ಅಭ್ಯರ್ಥಿಯ ಭಾವಚಿತ್ರವುಳ್ಳ ಯಾವುದಾದರು ಒಂದು ಗುರುತಿನ ಚೀಟಿ