ಬೆಂಗಳೂರು : ವೃತ್ತಿಪರ ಡಿಪ್ಲೊಮ ಪದವೀಧರ (working professional) ಅಭ್ಯರ್ಥಿಗಳಿಗೆ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಪ್ರವೇಶ ಕುರಿತು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮಹತ್ವದ ಸುತ್ತೋಲೆ ಹೊರಡಿಸಿದೆ.
ಸರ್ಕಾರದ ನಿರ್ದೇಶನದಂತೆ ವೃತ್ತಿಪರ ಡಿಪ್ಲೊಮ ಪದವೀಧರ ಅಭ್ಯರ್ಥಿಗಳಿಗೆ ಲ್ಯಾಟರಲ್ ಎಂಟ್ರಿ ಮೂಲಕ 2ನೇ ವರ್ಷ / 3ನೇ ಸೆಮಿಸ್ಟರ್ ಇಂಜಿನಿಯರಿಂಗ್ ಕೋರ್ಸುಗಳಿಗೆ ಪ್ರವೇಶಾತಿ ನೀಡಲು ಕೆಇಎ ಮೂಲಕ ಪ್ರತ್ಯೇಕ ಅರ್ಜಿಗಳನ್ನು ಆಹ್ವಾನಿಸಲು ಪ್ರಕಟಣೆಯನ್ನು ನೀಡಲಾಗಿತ್ತು.
AICTE, New Delhi ಸುತ್ತೋಲೆ ಅನ್ವಯ ಒಂದು ವರ್ಷದ ಸೇವಾನುಭವವನ್ನು ಹೊಂದಿರುವ ಡಿಪ್ಲೋಮಾ (working professional) ಅಭ್ಯರ್ಥಿಗಳನ್ನು ಲ್ಯಾಟರಲ್ ಎಂಟ್ರಿ ಮೂಲಕ 2ನೇ ವರ್ಷ / 3ನೇ ಸೆಮಿಸ್ಟರ್ ಇಂಜಿನಿಯರಿಂಗ್ ಕೋರ್ಸುಗಳಿಗೆ ಪರಿಗಣಿಸಲಾಗುವುದು ಎಂದು ಮತ್ತು 50 ಕಿಮಿ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಂದು ಸೂಚಿಸಲಾಗಿದೆ. ಈ ಹಿನ್ನಲೆಯಲ್ಲಿ ಒಂದು ವರ್ಷದ ಸೇವಾನುಭವವನ್ನು ಹೊಂದಿರುವ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಪ್ರಾಧಿಕಾರದ ವೆಬ್ಸೈಟಿಗೆ ಭೇಟಿ ನೀಡಲು ಕಾರ್ಯನಿರ್ವಾಹಕ ನಿರ್ದೇಶಕರು ಸುತ್ತೋಲೆ ಹೊರಡಿಸಿದೆ.