![](https://kannadadunia.com/wp-content/uploads/2024/01/a3cf76ef-ce35-4a9d-a0e2-5aa8344316ef-1024x576.jpg)
ತನ್ನ ಶೀರ್ಷಿಕೆಯಿಂದಲೇ ಸಾಕಷ್ಟು ಕುತೂಹಲ ಮೂಡಿಸಿರುವ ರಾಜ್ ಗುರು ನಿರ್ದೇಶನ ʼಕೆರೆ ಬೇಟೆʼ ಸಿನಿಮಾದ ಟೀಸರ್ ಇಂದು a2 ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ರಿಲೀಸ್ ಆಗಿದ್ದು, ಸಾಕಷ್ಟು ವೀಕ್ಷಣೆ ಪಡೆದುಕೊಳ್ಳುವ ಮೂಲಕ ನೋಡುಗರ ಗಮನ ಸೆಳೆದಿದೆ. ಡಾಲಿ ಧನಂಜಯ್ ಟೀಸರ್ ಲಾಂಚ್ ಮಾಡುವ ಮೂಲಕ ಚಿತ್ರ ತಂಡಕ್ಕೆ ಶುಭ ಹಾರೈಸಿದ್ದಾರೆ
ಈ ಚಿತ್ರವನ್ನು ಜನಮನ ಸಿನೆಮಾಸ್ ಬ್ಯಾನರ್ ನಡಿ ಜೈ ಶಂಕರ್ ಪಾಟೀಲ್ ನಿರ್ಮಾಣ ಮಾಡಿದ್ದು, ಗಗನ್ ಸಂಗೀತ ಸಂಯೋಜನೆ ನೀಡಿದ್ದಾರೆ. ಜ್ಞಾನೇಶ್ ಮಾತಾಡು ಸಂಕಲನವಿದ್ದು, ಪ್ರಮೋದ್ ಮರವಂತೆ ಸಾಹಿತ್ಯವಿದೆ. ನಟ ಗೌರಿಶಂಕರ್ ಸೇರಿದಂತೆ ಬಿಂದು ಶಿವರಾಂ, ಗೋಪಾಲಕೃಷ್ಣ ದೇಶಪಾಂಡೆ, ಸಂಪತ್ ಮೈತ್ರಿಯ, ಹರಿಣಿ ಶ್ರೀಕಾಂತ್, ಚಿಲ್ಲರ್ ಮಂಜು, ರಾಕೇಶ್ ಪೂಜಾರಿ, ವರ್ಧನ್ ತೀರ್ಥಹಳ್ಳಿ ತೆರೆ ಹಂಚಿಕೊಂಡಿದ್ದಾರೆ.