ತಿರುವನಂತಪುರಂ: ಲಾಲಿಪಾಪ್ ಅಂದ್ರೆ ಯಾವ ಮಕ್ಕಳಿಗೆ ಇಷ್ಟ ಇಲ್ಲ ಹೇಳಿ..? ದೊಡ್ಡವರು ಕೂಡ ಮಕ್ಕಳಂತೆ ಲಾಲಿಪಪ್ ತಿನ್ನುತ್ತಾರೆ. ಹಾಗೆಯೇ ಈ ಸಿಹಿ ತಿಂಡಿಯನ್ನು ಮನೆಯಲ್ಲಿ ಕೂಡ ತಯಾರಿಸಲು ಇಷ್ಟಪಟ್ಟು ಮಾಡಿದವರಿದ್ದಾರೆ.
ಹಾಗೆಯೇ ಕೇರಳದ ಪ್ರಸಿದ್ಧ ಯೂಟ್ಯೂಬ್ ಚಾನೆಲ್ ಆಗಿರುವ ʼವಿಲೇಜ್ ಫುಡ್ ಚಾನೆಲ್ʼ ಅವರು ಬರೋಬ್ಬರಿ ದೊಡ್ಡದಾದ ಲಾಲಿಪಾಪ್ ತಯಾರಿಸಿ ಸುದ್ದಿಯಾಗಿದ್ದಾರೆ.
ಹೌದು, ವಿಲೇಜ್ ಫುಡ್ ಚಾನೆಲ್ ನಲ್ಲಿ ಖಾದ್ಯ ತಯಾರಿಸುವ ಫಿರೋಜ್ ಚುಟ್ಟಿಪರ 25 ಕೆ.ಜಿ ತೂಕದ ಬೃಹತ್ ಲಾಲಿಪಾಪ್ ತಯಾರಿಸಿ ಸುದ್ದಿಯಾಗಿದ್ದಾರೆ. ದೊಡ್ಡ ಪಾತ್ರೆಯೊಂದರಲ್ಲಿ ಸಕ್ಕರೆ ಪಾಕ ಮಾಡಿ ಅದಕ್ಕೆ ಫುಡ್ ಕಲರ್ ಹಾಗೂ ಅನಾನಸು ಘಮ ಹಾಕಿ ಬೇಯಿಸಿದ್ದಾರೆ. ಬಳಿಕ ದೊಡ್ಡದಾದ ಮಡಿಕೆಗೆ ಪೈಪ್ ಇಟ್ಟು ಅದಕ್ಕೆ ಸಿದ್ಧವಾಗಿರುವ ಈ ಪದಾರ್ಥವನ್ನು ಮಡಿಕೆಯೊಳಗೆ ಹಾಕಿ 12 ಗಂಟೆಗಳ ಕಾಲ ಹಾಗೆಯೇ ಬಿಟ್ಟಿದ್ದಾರೆ. ಬಳಿಕ ಮಡಿಕೆಯನ್ನು ಒಡೆದು ಗಟ್ಟಿಯಾಗಿದ್ದ ಲಾಲಿಪಾಪ್ ಹೊರತೆಗೆದಿದ್ದಾರೆ.
BIG NEWS: ಭಾರೀ ಕುತೂಹಲ ಮೂಡಿಸಿದ ಯತ್ನಾಳ್ ದೆಹಲಿ ಭೇಟಿ
ಇವರು ಮಾಡಿರುವ ಈ ವಿಡಿಯೋ ಸಖತ್ ವೈರಲ್ ಆಗಿದ್ದು, ಒಂದು ಮಿಲಿಯನ್ ಮಂದಿ ವೀಕ್ಷಿಸಿದ್ದಾರೆ ಎನ್ನಲಾಗಿದೆ. ಲಾಲಿಪಾಪ್ ತಯಾರಿಸಿದ ಫಿರೋಜ್ ಚುಟ್ಟಿಪರ ಅವರ ಪ್ರತಿಭೆಗೆ ಜನತೆ ಭೇಷ್ ಅಂದಿದ್ದಾರೆ.