![](https://kannadadunia.com/wp-content/uploads/2024/12/a38bfe7f-6eac-402d-9f3d-4dd5bfdd483c.jpg)
ಏಪ್ರಿಲ್‌ನಲ್ಲಿ ಈ ಘಟನೆ ನಡೆದಿದ್ದು , ಸಿಸಿಕ್ಯಾಮೆರಾದಲ್ಲಿ ಸೆರೆಯಾಗಿದ್ದ ಘಟನೆಯ ದೃಶ್ಯ ಇದೀಗ ಇಂಟರ್ನೆಟ್ ನಲ್ಲಿ ಕಾಣಿಸಿಕೊಂಡಿದೆ. 28 ವರ್ಷದ ಮನೋಜ್ ಉನ್ನಿ ಎಂದು ಗುರುತಿಸಲಾದ ಬೈಕ್ ಸವಾರರೊಬ್ಬರು ಕೊಚ್ಚಿಯ ವಲಂಜಂಬಲಂನಲ್ಲಿ ರಸ್ತೆಗೆ ಅಡ್ಡಲಾಗಿ ಕಟ್ಟಿದ್ದ ಹಗ್ಗಕ್ಕೆ ಸಿಲುಕಿ ಬೈಕ್‌ನಿಂದ ಬಿದ್ದಿರುವುದನ್ನು ವೀಡಿಯೊ ತೋರಿಸುತ್ತದೆ.
ಪ್ರಧಾನಿ ಮೋದಿ ಭೇಟಿ ಹಿನ್ನೆಲೆ ಭದ್ರತಾ ಕ್ರಮಗಳ ಭಾಗವಾಗಿ ಹಗ್ಗವನ್ನು ಕಟ್ಟಲಾಗಿತ್ತು. ತಾಯಿಗೆ ಔಷಧಿ ಖರೀದಿಸಿ ಮನೆಗೆ ಮರಳುತ್ತಿದ್ದ ಮನೋಜ್ ಉನ್ನಿ ಈ ದುರ್ಘಟನೆಯಲ್ಲಿ ತಲೆಗೆ ಗಂಭೀರ ಗಾಯಗೊಂಡು ಸಾವನ್ನಪ್ಪಿದ್ದರು. ಈ ವಿಡಿಯೋ ಹಂಚಿಕೊಂಡು ಕೆಲವರು ರಸ್ತೆಯನ್ನು ಬ್ಲಾಕ್ ಮಾಡುವ ರೀತಿ ಇದೇನಾ ಎಂದು ಪೊಲೀಸರನ್ನ ಪ್ರಶ್ನಿಸಿದ್ರೆ, ಕೆಲವರು ಯುವಕ ಹೈಸ್ಪೀಡ್ ನಲ್ಲಿ ಹೋಗ್ತಿದ್ದೇ ಘಟನೆಗೆ ಕಾರಣವೆಂದು ಹೇಳಿದ್ದಾರೆ. ಈ ಘಟನೆ ಬಗ್ಗೆ ಪರ ವಿರೋಧ ಚರ್ಚೆಗಳೂ ನಡೆದಿವೆ.
His name was Manoj Unni. He was 28 years old. Returning after buying medicines for his mother.
Police denied any wrongdoing and said accident happened due to over speeding.
In short, you are responsible for your own life. Can find some random rope on road and it will be your… pic.twitter.com/B8APKppR1I
— Siddharth’s Echelon (@SiddharthKG7) December 5, 2024