ಕೇರಳದ ಪಾಲಕ್ಕಾಡ್ನ ಅಳಯೂರು ಗ್ರಾಮದಿಂದ ಕಾಣೆಯಾಗಿದ್ದ ಮಹಿಳೆಯೊಬ್ಬರು 11 ವರ್ಷಗಳ ಬಳಿಕ ಸಿಕ್ಕಿದ್ದಾರೆ. ಅವರು ಇಷ್ಟು ದಿನ ಪಕ್ಕದಲ್ಲೇ ಇದ್ದ ತಮ್ಮ ಹೆತ್ತವರ ಮನೆಯ ಪಕ್ಕದಲ್ಲಿ ತನ್ನ ಪ್ರಿಯಕರನೊಂದಿಗೆ ಇದ್ದರು ಎಂದು ತಿಳಿದುಬಂದಿದೆ.
ಫೆಬ್ರವರಿ 2010ರಲ್ಲಿ ತಮ್ಮ 18ನೇ ವಯಸ್ಸಿನಲ್ಲಿ ಮನೆ ಬಿಟ್ಟ ಸಜಿತಾ ಎಂಬ ಈ ಮಹಿಳೆ, 34 ವರ್ಷ ವಯಸ್ಸಿನ ಅಳಿಂಚುವಟ್ಟಿಲ್ ರಹಮಾನ್ ಎಂಬ ವ್ಯಕ್ತಿಯ ಕುಟುಂಬ ದೂರು ಕೊಟ್ಟ ಮೂರು ತಿಂಗಳ ಬಳಿಕ ಪತ್ತೆಯಾಗಿದ್ದಾರೆ. ರಹಮಾನ್ನ ಸಹೋದರ ಬಶೀರ್ ತನ್ನ ಸಹೋದರನನ್ನು ಮಂಗಳವಾರ ಪತ್ತೆ ಮಾಡಿದ್ದು, ಆತನ ಜಾಡು ಹಿಡಿದು ಹೊರಟ ಮೇಲೆ ರಹಮಾನ್ ಹಾಗೂ ಸಜಿತಾ ಮನೆಯೊಂದನ್ನು ಮಾಡಿಕೊಂಡು ವಾಸ ಮಾಡುತ್ತಿದ್ದ ವಿಚಾರ ತಿಳಿದುಬಂದಿದೆ.
ಆಂಗಿಕ ಭಾಷಾ ಕ್ಲಾಸ್ ಮೂಲಕ ಆನ್ಲೈನ್ನಲ್ಲಿ ಸಂಚಲನ ಸೃಷ್ಟಿಸಿದ 5ರ ಪೋರ
ಪೊಲೀಸರು ಇಬ್ಬರನ್ನೂ ಕೋರ್ಟ್ನ ಮುಂದೆ ಹಾಜರುಪಡಿಸಿದ್ದು, ಇಬ್ಬರೂ ಒಂದೇ ಮನೆಯಲ್ಲಿ ವಾಸ ಮಾಡಲು ಇಚ್ಛಿಸಿರುವುದಾಗಿ ಖುದ್ದು ಹೇಳಿಕೊಂಡ ಬಳಿಕ ಅವರನ್ನು ಅವರಿಚ್ಛೆಯಂತೆ ಬದುಕಲು ಬಿಡಲಾಗಿದೆ.
ಬೇರೆ ಬೇರೆ ಸಮುದಾಯಗಳಿಗೆ ಸೇರಿದ್ದ ಕಾರಣ ತಮ್ಮ ಪ್ರೇಮ ಸಲ್ಲಾಪವನ್ನು ಹೀಗೆ ಗುಟ್ಟಾಗಿ ಇಟ್ಟುಕೊಂಡಿದ್ದರು ಎಂದು ನೆನ್ಮಾರಾ ಪೊಲೀಸ್ ಠಾಣಾಧಿಕಾರಿ ದೀಪ ಕುಮಾರ್ ತಿಳಿಸಿದ್ದಾರೆ.
ಕೋವಿಡ್ ಲಸಿಕೆ ಪಡೆದ ಬಳಿಕ ದೀರ್ಘಾಯುಷ್ಯದ ಗುಟ್ಟು ಬಿಚ್ಚಿಟ್ಟ 125 ವರ್ಷದ ವೃದ್ದ
ಮನೆ ಬಿಟ್ಟು ಹೋದಾಗ ತನ್ನೊಂದಿಗೆ ಯಾವುದೇ ಮೊಬೈಲ್ ಇಟ್ಟುಕೊಳ್ಳದಿದ್ದ ಕಾರಣದಿಂದ ಸಜಿತಾರನ್ನು ಪತ್ತೆ ಮಾಡುವುದು ಪೊಲೀಸರಿಗೆ ಕಷ್ಟವಾಗಿತ್ತು. ತಮ್ಮೂರಿನ ಪಕ್ಕದೂರಿನಲ್ಲೇ ಚಿಕ್ಕದೊಂದು ಕೋಣೆ ಹಾಗೂ ಮನೆ ಮಾಡಿಕೊಂಡು, ಯಾರಿಗೂ ಗೊತ್ತಾಗದಂತೆ ಸಂಸಾರ ನಡೆಸುತ್ತಿದ್ದರು.