
ಪಾಲಕ್ಕಾಡ್: ದೇವರನ್ನು ಮೆಚ್ಚಿಸಿ ಕೃಪೆ ಪಡೆಯಲು ಮಹಿಳೆಯೊಬ್ಬಳು ತನ್ನ ಆರು ವರ್ಷದ ಮಗುವನ್ನು ಬಲಿಕೊಟ್ಟ ಘಟನೆ ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ ನಡೆದಿದೆ.
30 ವರ್ಷದ ಮಹಿಳೆ ಮದರಸಾ ಶಿಕ್ಷಕಿಯಾಗಿದ್ದು ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ. ಈಗಾಗಲೇ ಮೂವರು ಮಕ್ಕಳಿರುವ ಮಹಿಳೆ ನಾಲ್ಕನೇ ಮಗುವಿನ ಗರ್ಭಿಣಿಯಾಗಿದ್ದಾಳೆ. ಚಾಲಕನಾಗಿರುವ ಪತಿ ಮತ್ತು ಮಕ್ಕಳಿಬ್ಬರು ಮಲಗಿದ್ದ ಸಂದರ್ಭದಲ್ಲಿ ಮತ್ತೊಂದು ಮಗುವನ್ನು ಸ್ನಾನ ಮಾಡಿಸಲು ಕರೆದುಕೊಂಡು ಹೋದ ಮಹಿಳೆ ಕತ್ತು ಸೀಳಿ ಕೊಲೆ ಮಾಡಿದ್ದಾಳೆ. ದೇವರನ್ನು ತೃಪ್ತಿಪಡಿಸಲು ಈ ರೀತಿ ಮಾಡಿರುವುದಾಗಿ ಪೊಲೀಸರಿಗೆ ಹೇಳಿಕೊಂಡಿದ್ದಾಳೆ ಎಂದು ಹೇಳಲಾಗಿದೆ.