ಪತ್ತನಂತಿಟ್ಟ: 27 ದಿನದ ಗಂಡು ಮಗುವಿನ ತಲೆಯನ್ನು ಗೋಡೆಗೆ ಬಡಿದು ಕೊಂದಿದ್ದಕ್ಕಾಗಿ ತಾಯಿಯನ್ನು ಸೋಮವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೋಲೀಸರ ಪ್ರಕಾರ, ಅನಾರೋಗ್ಯದಿಂದ ಬಳಲುತ್ತಿದ್ದ ಮಗು ನಿರಂತರವಾಗಿ ಅಳುತ್ತಿದ್ದರಿಂದ ಆಕ್ರೊಶಗೊಂಡ 21 ವರ್ಷದ ತಾಯಿ ಗೋಡೆಗೆ ಮಗುವಿನ ತಲೆ ಬಡಿದು ಕೊಲೆ ಮಾಡಿದ್ದಾಳೆ.
ಡಿಸೆಂಬರ್ 9 ರಂದು ಈ ಘಟನೆ ಸಂಭವಿಸಿದೆ. ಅಂದು ಬೆಳಗ್ಗೆ 11 ಗಂಟೆಗೆ ಮಗುವನ್ನು ಇಲ್ಲಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯರು ಪರೀಕ್ಷಿಸಿ ಔಷಧ ನೀಡಿದ ನಂತರ ಮನೆಗೆ ಮರಳಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ತರುವಾಯ, ಮಗುವಿನ ಸ್ಥಿತಿ ಹದಗೆಟ್ಟಿದ್ದರಿಂದ ತಾಲೂಕು ಆಸ್ಪತ್ರೆಗೆ ಸಾಗಿಸಲಾಗಿದ್ದು, ಮಗು ಸಾವನ್ನಪ್ಪಿದೆ.
ಮಹಿಳೆ ಅಡುಗೆ ಕೆಲಸ ಮಾಡುತ್ತಿದ್ದು, 45 ವರ್ಷದ ಪ್ರಿಯಕರನೊಂದಿಗೆ ವಾಸಿಸುತ್ತಿದ್ದಳು. ಆಶ್ರಮವನ್ನು ನಡೆಸುತ್ತಿದ್ದ ತಂದೆ ಜೋಜಿ ಥಾಮಸ್ ನೀಡಿದ ಹೇಳಿಕೆ ಆಧರಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಡಿಸೆಂಬರ್ 10 ರಂದು ಪೋಸ್ಟ್ ಮಾರ್ಟಮ್ ನಂತರ, ಪೊಲೀಸ್ ಅಧಿಕಾರಿಯೊಬ್ಬರು ವೈದ್ಯರೊಂದಿಗೆ ಮಾತನಾಡಿದ್ದಾರೆ. ಮಗುವಿನ ತಲೆಯ ಹಿಂಭಾಗದಲ್ಲಿ ಗಾಯಗಳಾಗಿರುವುದನ್ನು ಗಮನಿಸಲಾಗಿದೆ. ಶಿಶುವಿನ ತಲೆಬುರುಡೆಯಾಗಿದ್ದರಿಂದ ಗಾಯ ಗುರುತಿಸಲಾಗಲಿಲ್ಲ ಅಥವಾ ಗೋಚರಿಸುವುದಿಲ್ಲ ಎಂದು ಪೊಲೀಸರು ಹೇಳಿದ್ದು, ಪೊಲೀಸ್ ಅಧಿಕಾರಿ ನಂತರ ಮಗುವಿನ ಪೋಷಕರನ್ನು ಭೇಟಿ ಮಾಡಿ ಪ್ರಶ್ನಿಸಿದ್ದಾರೆ.
ಮಹಿಳೆ ಮಾನಸಿಕ ಅಸ್ವಸ್ಥಳಂತೆ ವರ್ತಿಸಿದ್ದಾಳೆ. ದಂಪತಿಗಳ ಬಗ್ಗೆ ವಿಚಾರಣೆ ನಡೆಸಿದಾಗ, ಅವರು ಫೋನ್ ಮೂಲಕ ಪರಸ್ಪರ ಭೇಟಿಯಾಗಿ ಆಶ್ರಮದಲ್ಲಿ ಒಟ್ಟಿಗೆ ವಾಸಿಸಲು ಪ್ರಾರಂಭಿಸಿದ್ದರು ಎಂದು ಪೊಲೀಸರು ಕಂಡುಕೊಂಡರು.
ಮಗುವಿನ ತಂದೆಗೆ ಈಗಾಗಲೇ ಮದುವೆಯಾಗಿದ್ದು, ಈ ಸಂಗತಿ ತಿಳಿದೂ ಮಹಿಳೆ ಆತನೊಂದಿಗೆ ವಾಸಿಸುತ್ತಿದ್ದಳು. ನಂತರದ ವಿಚಾರಣೆಯಲ್ಲಿ ತಾಯಿಯೇ ಮಗುವನ್ನು ಕೊಂದಿರುವುದು ಬೆಳಕಿಗೆ ಬಂದಿದ್ದು, ಆಕೆಯನ್ನು ಬಂಧಿಸಲಾಗಿದೆ.
ಮಹಿಳೆ ಕೊಟ್ಟಾಯಂನ ಖಾಸಗಿ ಸಂಸ್ಥೆಯಲ್ಲಿ ಓದುತ್ತಿದ್ದಾಗ ತನ್ನ ಪ್ರಿಯಕರನನ್ನು ಫೋನ್ ಮೂಲಕ ಭೇಟಿಯಾದಳು. ಅನಾರೋಗ್ಯದ ಶಿಶು ತನ್ನ ಮುಂದಿನ ಅಧ್ಯಯನಕ್ಕೆ ಹಾನಿಯಾಗುತ್ತದೆ ಎಂದು ಮಗುವನ್ನು ಕೊಲ್ಲಲು ನಿರ್ಧರಿಸಿದಳು ಎಂದು ಪೊಲೀಸರು ತಿಳಿಸಿದ್ದಾರೆ.