ಎರ್ನಾಕುಲಂ(ಕೇರಳ): ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ 37 ವರ್ಷದ ಮಹಿಳೆಯನ್ನು ಕೇರಳ ಪೊಲೀಸರು ಎರ್ನಾಕುಲಂ ಜಿಲ್ಲೆಯಲ್ಲಿ ಬಂಧಿಸಿದ್ದಾರೆ.
ಆರೋಪಿಯನ್ನು ರೇಷ್ಮಾ ಎಂದು ಗುರುತಿಸಲಾಗಿದ್ದು, ಮದ್ಯದ ಬಾಟಲಿಗಳನ್ನು ತನ್ನ ಬ್ಯಾಗ್ ನಲ್ಲಿ ಸಾಗಿಸುತ್ತಿದ್ದಳು. ಅವುಗಳನ್ನು ಗ್ರಾಹಕರಿಗೆ ಸ್ಥಳದಲ್ಲೇ ‘ಮೊಬೈಲ್ ಬಾರ್’ ನಂತೆ ಮಾರಾಟ ಮಾಡುತ್ತಿದ್ದಳು.
ಆಕೆಯ ವ್ಯಾಪಾರ ಬಹುತೇಕ ಸಾರ್ವಜನಿಕ ರಜಾದಿನಗಳು ಮತ್ತು ರಾಜ್ಯ-ಬಿವರೇಜ್ ಕಾರ್ಪೊರೇಷನ್ ಮಳಿಗೆಗಳು ಮುಚ್ಚಲ್ಪಡುವ ಇತರ ಶುಷ್ಕ ದಿನಗಳಲ್ಲಿ ಹೆಚ್ಚಾಗಿ ನಡೆಯುತ್ತಿತ್ತು.
ರೇಷ್ಮಾ ಮದ್ಯ ಮಾರಾಟ ಮಾಡಲು ಜೊತೆಗೆ ಗ್ಲಾಸ್ ಗಳನ್ನು ಕೊಂಡೊಯ್ಯುತ್ತಿದ್ದರು, ಇದರಿಂದಾಗಿ ಅವರು ಪ್ರತಿ ಪೆಗ್ ಗೆ ಜನರಿಗೆ ಶುಲ್ಕ ವಿಧಿಸುತ್ತಿರಬಹುದು ಎಂದು ಶಂಕಿಸಲಾಗಿದೆ.
ಸಾರ್ವಜನಿಕ ರಜಾ ದಿನಗಳಲ್ಲಿ ರೇಷ್ಮಾ ಎರ್ನಾಕುಲಂ ಮಾರುಕಟ್ಟೆ ಕಾಲುವೆ ರಸ್ತೆಯ ಬಳಿ ಆಗಾಗ್ಗೆ ಮದ್ಯ ಮಾರಾಟ ಮಾಡುತ್ತಿದ್ದಳು. ಫೋನ್ ಮೂಲಕ ಸಂಭಾವ್ಯ ಗ್ರಾಹಕರನ್ನು ಸೆಳೆಯುತ್ತಿದ್ದಳು. ಪಾರ್ಟಿಗೆ ಆಸಕ್ತಿಯಿದ್ದರೆ, ಅವರು ಬಂದು ಮದ್ಯ ಪಡೆಯುತ್ತಿದ್ದರು. ತಾವಿರುವ ಸ್ಥಳದ ಬಗ್ಗೆ ಮಾಹಿತಿ ಹಂಚಿಕೊಳ್ಳುತ್ತಿದ್ದರು.
ಕೆಲಕಾಲ ಪೊಲೀಸರ ವಶದಲ್ಲಿದ್ದ ಆರೋಪಿ ಆಕೆಯ ಕಾರ್ಯವೈಖರಿಯನ್ನು ಸಂಪೂರ್ಣವಾಗಿ ಬಹಿರಂಗಪಡಿಸಿದ ನಂತರ, ಅಧಿಕಾರಿಗಳು ಸೆಪ್ಟೆಂಬರ್ 1 ರಂದು ಬಂಧಿಸಿದ್ದಾರೆ. ಎರ್ನಾಕುಲಂ ಸೆಂಟ್ರಲ್ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಎಸ್. ವಿಜಯಶಂಕರ್ ಮತ್ತು ಎಎಸ್ಐ ಸಿಂಧು ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.