
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಚೋವ್ವಾ ರೈಲ್ವೆ ಕ್ರಾಸಿಂಗ್ ಬಳಿ ರೈಲು ಹಳಿಯ ಮಧ್ಯೆ ಕಾರು ಸಿಲುಕಿಕೊಂಡಿರೋದನ್ನು ಕಾಣಬಹುದಾಗಿದೆ. ಡ್ರೈವಿಂಗ್ ಸೀಟಿನಲ್ಲಿ ಕುಳಿತಿರುವ ವ್ಯಕ್ತಿಯನ್ನು ಕ್ಯಾಮರಾ ದೃಶ್ಯಾವಳಿಗಳಲ್ಲಿ ಕಾಣಬಹುದಾಗಿದೆ. ಬರೋಬ್ಬರಿ 15 ನಿಮಿಷಗಳ ಕಾಲ ಕಾರು ರೇಲ್ವೆ ಟ್ರ್ಯಾಕ್ ಮೇಲೆಯೇ ಇತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ರೈಲ್ವೆ ಹಳಿಗಳ ಮೇಲೆ ಕಾರು ಹತ್ತಿಸಿದ್ದ ಜಯಪ್ರಕಾಶ್ ಕುಡಿದ ಮತ್ತಿನಲ್ಲಿ ಗಿಯರ್ ಬದಲಾಯಿಸಲು ಹರಸಾಹಸ ಪಡ್ತಿರೋದನ್ನು ಕಾಣಬಹುದಾಗಿದೆ. ಸ್ಥಳೀಯ ಮಾಧ್ಯಮಗಳ ವರದಿಯ ಪ್ರಕಾರ, ರೈಲ್ವೆ ಟ್ರ್ಯಾಕ್ ಮೇಲೆ 15 ನಿಮಿಷಕ್ಕೂ ಅಧಿಕ ಕಾಲ ಜಯಪ್ರಕಾಶ್ ರೈಲ್ವೆ ಹಳಿಯ ಮೇಲೆಯೇ ಇದ್ದರು ಎನ್ನಲಾಗಿದೆ. ರೈಲ್ವೆ ಕ್ರಾಸಿಂಗ್ನಲ್ಲಿದ್ದ ಸಿಬ್ಬಂದಿಯು ಜಯಪ್ರಕಾಶ್ ಕಾರನ್ನು ನೋಡುತ್ತಿದ್ದಂತೆಯೇ ಪೊಲೀಸರಿಗೆ ಮಾಹಿತಿ ಮಾಹಿತಿ ನೀಡಿದ್ದಾರೆ. ಕೂಡಲೇ ಜಯಪ್ರಕಾಶ್ರನ್ನು ಬಂಧಿಸಲಾಗಿದ್ದು ಸದ್ಯ ಜಯಪ್ರಕಾಶ್ ಜಾಮೀನಿನ ಮೇಲೆ ಹೊರ ಬಂದಿದ್ದಾರೆ ಎನ್ನಲಾಗಿದೆ.