ಅನುಕರಣೀಯ ನಡೆಯೊಂದರಲ್ಲಿ ಕೇರಳದ ಕೊಟ್ಟಾಯಂ ಜಿಲ್ಲೆಯ ಗ್ರಾಮ ಪಂಚಾಯಿತಿಯೊಂದು ಸಾರ್ವಜನಿಕರಿಂದ ’ವಿನಂತಿ’ಗಳನ್ನು ಪಡೆಯುವ ಬದಲಿಗೆ ಅವರ ’ಇಚ್ಛೆ’ಗಳನ್ನು ಅರಿಯುವ ವ್ಯವಸ್ಥೆ ತರಲು ನಿರ್ಧರಿಸಿದೆ.
ಯುಡಿಎಫ್ ಆಳ್ವಿಕೆಯ ಪಣಚಿಕ್ಕಾಡ್ ಗ್ರಾಮ ಪಂಚಾಯಿತಿಯು ಈ ವಿಶಿಷ್ಟ ಅಭಿಯಾನಕ್ಕೆ ಮುಂದಾಗಿದೆ. ಸಾರ್ವಜನಿಕರಿಂದ ಸ್ವೀಕರಿಸುವ ಅರ್ಜಿಗಳಲ್ಲಿ ’ವಿನಂತಿ’ ಶಬ್ದ ತೆಗೆದುಹಾಕಿ ’ಇಚ್ಛೆ’ ಪದವನ್ನು ಸೇರಿಸಲಾಗಿದೆ. ಈ ಬದಲಾವಣೆಯನ್ನು ಪಂಚಾಯಿತಿ ಕಾರ್ಯಾಲಯದ ನೋಟಿಸ್ ಬೋರ್ಡ್ ಮೂಲಕ ಸಾರ್ವಜನಿಕರಿಗೆ ಗೊತ್ತುಪಡಿಸಲಾಗಿದೆ.
“ಯಾವುದೇ ಸೇವೆ ಪಡೆಯಲು ಜನರು ವಿನಂತಿ ಮಾಡಬೇಕಾಗಿಲ್ಲ. ಇದೊಂದು ಪುರಾತನ ಸಂಪ್ರದಾಯವಾಗಿದೆ. ಈ ವ್ಯವಸ್ಥೆ ಬದಲಿಸಲು ಸಮಿತಿಯಲ್ಲಿ ಸರ್ವಾನುಮತದ ನಿರ್ಧಾರ ಮಾಡಲಾಗಿದೆ. ಪಂಜಾಯಿತಿ ಸೇವೆಗಳನ್ನು ಪಡೆಯುವುದು ಪ್ರಜೆಗಳ ಹಕ್ಕು” ಎಂದು ಪಂಚಾಯಿತಿ ಅಧ್ಯಕ್ಷೆ ಅನ್ನಿ ಮಮ್ಮೆನ್ ತಿಳಿಸಿದ್ದಾರೆ.
ವಿದ್ಯಾರ್ಥಿಗಳೇ ಗಮನಿಸಿ: ವೀಕೆಂಡ್ ಕರ್ಫ್ಯೂ ಜಾರಿ ಹಿನ್ನಲೆ, ಪರೀಕ್ಷೆಗಳು ಮುಂದೂಡಿಕೆ
“ಇಂಥ ಅಭ್ಯಾಸಗಳು ಬ್ರಿಟಿಷ್ ಕಾಲಕ್ಕೆ ಸೇರಿದ್ದವಾಗಿವೆ. ಬಹಳಷ್ಟು ಬದಲಾವಣೆ ಆಗಬೇಕಿದೆ. ಸರ್ಕಾರೀ ಅಧಿಕಾರಿಗಳ ಸಂಬಳ ಕೊಡುವುದೇ ಸಾರ್ವಜನಿಕರ ದುಡ್ಡಿನಲ್ಲಿ ಎನ್ನುವಾಗ ಸಾರ್ವಜನಿಕರು ತಮಗೆ ಬೇಕಾದ ಸೇವೆಗಳನ್ನು ಬೇಡಿ ಪಡೆಯಬಾರದು” ಎಂದು ಪಂಚಾಯಿತಿ ಕಾರ್ಯದರ್ಶಿ ಎನ್. ಅರುಣ್‌ಕುಮಾರ್ ತಿಳಿಸಿದ್ದಾರೆ.
ಆಡಳಿತ ಸುಧಾರಣೆಗಳನ್ನು ತರುವ ಸಂಬಂಧ ಔಪಚಾರಿಕ ಹೆಜ್ಜೆ ಇಟ್ಟಿದ್ದೇವೆ. ಈ ಮೂಲಕ ಎಲ್ಲಾ ಪಂಚಾಯಿತಿಗಳಿಗೂ ಈ ಸುಧಾರಣೆ ಅನುಷ್ಠಾನಕ್ಕೆ ತರಲು ಸರ್ಕಾರದಿಂದ ಆದೇಶ ಹೊರಡಿಸಬಹುದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.