
ವಡಕ್ಕುನಾಥನ್ ದೇವಾಲಯದಲ್ಲಿ ಪ್ರತಿ ವರ್ಷ ಈ ಹಬ್ಬವು ಬೃಹತ್ ಮೆರವಣಿಗೆ, ಚಂಡೆ ಮೇಳ, ವಿವಿಧ ಚಿನ್ನದ ಆಭರಣಗಳನ್ನು ಧರಿಸಿರುವ 50 ಕ್ಕೂ ಹೆಚ್ಚು ಆನೆಗಳ ಮೆರವಣಿಗೆ ಅದ್ಭುತ ಅನುಭವವನ್ನು ನೀಡುತ್ತದೆ.
ಈ ಹಬ್ಬದ ಬಗ್ಗೆ ಕೇರಳ ಪ್ರವಾಸೋದ್ಯಮ ಇಲಾಖೆಯು ಪ್ರಯಾಣದ ಉತ್ಸಾಹಿಗಳ ಗಮನವನ್ನು ಸೆಳೆಯಲು ಹಲವಾರು ಟ್ವೀಟ್ಗಳನ್ನು ಹಂಚಿಕೊಂಡಿದೆ. ತ್ರಿಶೂರ್ ಪೂರಂ ಹಬ್ಬವನ್ನು ಏಪ್ರಿಲ್ 30 ರಂದು ತಪ್ಪಿಸಿಕೊಳ್ಳದಿರಿ ಎಂದಿದೆ.
ಮತ್ತೊಂದು ಟ್ವೀಟ್ನಲ್ಲಿ, “ಕಣ್ಣು ಮತ್ತು ಕಿವಿಗಳಿಗೆ ಹಬ್ಬ, ಆತ್ಮವನ್ನು ಉಲ್ಲೇಖಿಸಬಾರದು. ನೀವು ಇರುತ್ತೀರಿ, ಅಲ್ಲವೇ?” ಎಂದು ವೀಕ್ಷಕರ ಹೃದಯವನ್ನು ಕರಗಿಸುವಂತ ಹಬ್ಬದ ಆಚರಣೆಯ ಫೋಟೋಗಳನ್ನು ಹಂಚಿಕೊಂಡಿದೆ.
ಕಲಾವಿದರು ಜಂಬೂಸವಾರಿಗಾಗಿ ಆಭರಣ ಸಿದ್ಧ ಮಾಡುತ್ತಿರುವ ಫೋಟೋ ಸೇರಿದಂತೆ ಅರ್ಜೆಂಟೀನಾದ ಕ್ಯಾಮಿಲಾ ಎಂಬ ಮಹಿಳೆಯು ತ್ರಿಶೂರ್ ಪೂರಂ ಹಬ್ಬ ಆಚರಣೆ ಬಗ್ಗೆ ಉತ್ಸುಕರಾಗಿರುವ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿರುವ ವಿಡಿಯೋ ಹಂಚಿಕೊಂಡಿದೆ.