alex Certify ಕೊರೊನಾ ಸೋಂಕು ಹೆಚ್ಚಾದ್ರೂ ವೀಕೆಂಡ್ ಲಾಕ್ಡೌನ್ ತೆಗೆಯಲು ಮುಂದಾದ ಸರ್ಕಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಸೋಂಕು ಹೆಚ್ಚಾದ್ರೂ ವೀಕೆಂಡ್ ಲಾಕ್ಡೌನ್ ತೆಗೆಯಲು ಮುಂದಾದ ಸರ್ಕಾರ

केरल में कोरोना के बढ़ते मामलों के बीच वीकेंड लॉकडाउन हटाएगी सरकार, रात 9 बजे तक खुलेंगी दुकानें | kerala to end weekend lockdown curbs with triple lockdown warning shops can open

ಕೇರಳದಲ್ಲಿ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ನಿರಂತರವಾಗಿ ಹೆಚ್ಚುತ್ತಿವೆ. ಕೇರಳದಲ್ಲಿ ಪ್ರತಿ ದಿನ ಹೆಚ್ಚಿನ ಪ್ರಕರಣಗಳು ವರದಿಯಾಗ್ತಿವೆ. ಈ ಎಲ್ಲದರ ನಡುವೆ, ಕೇರಳ ಸರ್ಕಾರ ಬುಧವಾರ ವಾರಾಂತ್ಯದ ಲಾಕ್‌ಡೌನ್ ತೆಗೆದುಹಾಕಲು ನಿರ್ಧರಿಸಿದೆ. ಆರೋಗ್ಯ ಸಚಿವೆ ವೀಣಾ ಜಾರ್ಜ್ ಬುಧವಾರ ವಿಧಾನಸಭೆಯಲ್ಲಿ ಈ ವಿಷ್ಯ ತಿಳಿಸಿದ್ದಾರೆ.

ಮಂಗಳವಾರ ಮುಖ್ಯಮಂತ್ರಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕೋವಿಡ್ ನಿಯಂತ್ರಣ ಯೋಜನೆಯನ್ನು ತಿದ್ದುಪಡಿ ಮಾಡಲು ನಿರ್ಧರಿಸಲಾಯಿತು. ಕೋವಿಡ್ ಮ್ಯಾನೇಜ್‌ಮೆಂಟ್ ಪ್ಯಾನೆಲ್‌ನ ತಜ್ಞರು ನೀಡಿದ ವರದಿಯನ್ನು ಚರ್ಚಿಸಿದ ನಂತರ, ಸಭೆಯಲ್ಲಿ ಹಾಜರಿದ್ದ ಸದಸ್ಯರು ಕೆಲವು ನಿರ್ಬಂಧಗಳೊಂದಿಗೆ ರಾತ್ರಿ 9 ರವರೆಗೆ ಅಂಗಡಿಗಳನ್ನು ತೆರೆಯಲು ಅವಕಾಶ ನೀಡುವಂತೆ ಶಿಫಾರಸು ಮಾಡಿದ್ದರು.

ವರ್ಷದ ಬಳಿಕವೂ ಕಾರ್ಯ ನಿರ್ವಹಿಸುತ್ತಿತ್ತು ನೀರಿನಲ್ಲಿ ಬಿದ್ದ ಮೊಬೈಲ್

ಇನ್ಮುಂದೆ ಕೇರಳದಲ್ಲಿ ಅಂಗಡಿಗಳು ವಾರದ 6 ದಿನಗಳು ಬೆಳಿಗ್ಗೆ 7 ರಿಂದ ರಾತ್ರಿ 9 ರವರೆಗೆ ತೆರೆದಿರುತ್ತವೆ. ಒಂದು ವಾರದಲ್ಲಿ 1000 ಜನಸಂಖ್ಯೆಯಲ್ಲಿ 10 ಕ್ಕಿಂತ ಹೆಚ್ಚು ಜನರು ಸೋಂಕಿಗೆ ಒಳಗಾದ್ರೆ ತ್ರಿವಳಿ ಲಾಕ್‌ಡೌನ್ ಜಾರಿಯಾಗಲಿದೆ. ಓಣಂ ಮತ್ತು ಸ್ವಾತಂತ್ರ್ಯ ದಿನಾಚರಣೆಯ ದೃಷ್ಟಿಯಿಂದ, ಆಗಸ್ಟ್ 15 ಮತ್ತು ಆಗಸ್ಟ್ 22 ರಂದು ಲಾಕ್‌ಡೌನ್ ಇರುವುದಿಲ್ಲ. ವಿವಾಹ ಸಮಾರಂಭ ಅಥವಾ ಅಂತ್ಯಕ್ರಿಯೆಗೆ ಕೇವಲ 20 ಜನರಿಗೆ ಮಾತ್ರ ಅವಕಾಶವಿದೆ.

ಮಂಗಳವಾರ ಕೇರಳದಲ್ಲಿ 23,676 ಹೊಸ ಕೋವಿಡ್ -19 ಪ್ರಕರಣಗಳು ವರದಿಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 34.49 ಲಕ್ಷಕ್ಕೆ ಏರಿಕೆಯಾಗಿದೆ. 148 ಜನರು ಸೋಂಕಿಗೆ ಸಾವನ್ನಪ್ಪಿದ್ದಾರೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...