ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಶಿಕ್ಷಕನೊಬ್ಬನಿಗೆ ತ್ರಿಶ್ಶೂರಿನ ವಿಶೇಷ ನ್ಯಾಯಾಲಯ ಐದು ವರ್ಷಗಳ ಕಠಿಣ ಶಿಕ್ಷೆ ವಿಧಿಸಿದ್ದು, ಜೊತೆಗೆ 50,000 ರೂ.ಗಳ ದಂಡವನ್ನೂ ವಿಧಿಸಿದೆ.
ಏಪ್ರಿಲ್ 9, 2015ರಲ್ಲಿ ಈ ಘಟನೆ ಜರುಗಿದ್ದು, ಆ ವೇಳೆ ಸಂತ್ರಸ್ತೆಗೆ 13 ವರ್ಷ ವಯಸ್ಸು. ಇಂಗ್ಲಿಷ್ ಮಾತನಾಡುವುದನ್ನು ಕಲಿಯುವ ಕೋರ್ಸ್‌ನ ತರಗತಿಗೆ ಬರುತ್ತಿದ್ದ ಸಂತ್ರಸ್ತೆಯ ಮೇಲೆ, ತರಗತಿಯಲ್ಲಿ ಬೇರೆ ವಿದ್ಯಾರ್ಥಿನಿಯರು ಇಲ್ಲದಿರುವ ವೇಳೆ, ಅರುಣ್ ಹೆಸರಿನ ಆರೋಪಿ ತರಬೇತುದಾರ ಅತ್ಯಾಚಾರವೆಸಗಲು ಯತ್ನಿಸಿದ್ದಾನೆ.
ಸಿಸಿಟಿವಿ ದೃಶ್ಯಾವಳಿ ಆಧಾರದ ಮೇಲೆ ಅರುಣ್‌ನನ್ನು ತಪ್ಪಿತಸ್ಥ ಎಂದು ಕೋರ್ಟ್ ತೀರ್ಪಿತ್ತಿದ್ದು, ದೈಹಿಕ ಸಾಕ್ಷಿಗಳು ಹಾಗೂ 8 ಮಂದಿ ಸಾಕ್ಷಿಗಳ ಹೇಳಿಕೆಗಳನ್ನು ಆಧರಿಸಿ ವಿಶೇಷ ನ್ಯಾಯಾಧೀಶ ಕೆ ಪಿ ಅಜಯ ಕುಮಾರ್ ಈ ತೀರ್ಪು ನೀಡಿದ್ದಾರೆ.
ದಂಡ ಪಾವತಿಸದೇ ಇದ್ದರೆ ಆರೋಪಿಯು ಆರು ತಿಂಗಳು ಹೆಚ್ಚುವರಿ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ. ಆತ ದಂಡ ಕಟ್ಟಿದರೆ ಆ ಮೊತ್ತವನ್ನು ಸಂತ್ರಸ್ತೆಗೆ ನೀಡಲಾಗುವುದು ಎಂದು ಕೋರ್ಟ್ ಆದೇಶ ನೀಡಿದೆ.
ಇತ್ತೀಚೆಗೆ ಉತ್ತರ ಪ್ರದೇಶದ ಸೀತಾಪುರದ ಶಾಲೆಯೊಂದರ ಮುಖ್ಯಶಿಕ್ಷಕ ಒಂಬತ್ತು ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಲು ಯತ್ನಿಸಿದ ಘಟನೆ ಜರುಗಿದೆ.
Shocking: ಶಾಲೆಯಿಂದ ಮನೆಗೆ ಮರಳುತ್ತಿದ್ದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ
ನಾಲ್ಕನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ತನ್ನ ಪುತ್ರಿಗೆ ಸೀತಾಪುರದ ಗೊಂಡ್ಲಾಮೌ ಬ್ಲಾಕ್‌ನಲ್ಲಿರುವ ತನ್ನ ಶಾಲೆಗೆ ತೆರಳಿದ್ದ ವೇಳೆ, ಆಕೆಯನ್ನು ಶಾಲೆಯ ಕೋಣೆಯೊಂದಕ್ಕೆ ಕರೆಯಿಸಿಕೊಂಡ ಮುಖ್ಯಶಿಕ್ಷಕ ಅಸಹನೀಯ ವಿಡಿಯೋ ತೋರಿದ್ದಲ್ಲದೇ, ಕೋಣೆಯ ಬಾಗಿಲು ಲಾಕ್ ಮಾಡಿಕೊಂಡು ಬಾಲಕಿ ಮೇಲೆ ಅತ್ಯಾಚಾರಗೈಯ್ಯಲು ಮುಂದಾದ ವೇಳೆ ಆಕೆ ಜೋರಾಗಿ ಕಿರುಚಿಕೊಂಡು ಸಹಾಯಕ್ಕಾಗಿ ಅಂಗಾಲಾಚಿದ್ದಾಳೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಬಾಲಕಿಯ ತಂದೆ ವಿವರಿಸಿದ್ದಾರೆ.