ಕೆಲ ದಿನಗಳಿಂದ ನಾಪತ್ತೆಯಾಗಿದ್ದ ಭಾರತೀಯ ಮೂಲದ ಕೇರಳ ವಿದ್ಯಾರ್ಥಿನಿ ಸ್ಕಾಟ್ಲೆಂಡ್ ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ.
ಕೇರಳ ಮೂಲದ 22 ವರ್ಷದ ಸಂತ್ರಾ ಸಾಜು ಸ್ಕಟಿಷ್ ನ ಎಡಿನ್ ಬರ್ಗ್ ನಲ್ಲಿರುವ ಹೆರಿಯಟ್-ವ್ಯಾಟ್ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಡಿಸೆಂಬರ್ 6ರ ಸಂಜೆ ಲಿವಿಂಗ್ ಸ್ಟನ್ ನಲ್ಲಿರುವ ಆಲ್ಮಂಡ್ ವೇಲ್ ನಲ್ಲಿರುವ ಅಸ್ಡಾ ಸೂಪರ್ ಮಾರ್ಕೆಟ್ ನಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದ ಸಂತ್ರಾ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಳು.
ಸಂತ್ರಾ ಶವ ಇದೀಗ ಎಡಿನ್ ಬರ್ಗ್ ನ ನ್ಯೂಬ್ರಿಡ್ಜ್ ಬಳಿ ನದಿಯಲ್ಲಿ ಪತ್ತೆಯಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಇದು ಕೇರಳ ಮೂಲದ ಸಂತ್ರಾ ಶವ ಎಂದು ಗುರುತಿಸಲಾಗಿದೆ. ಖಚಿತ ಪಡಿಸಿಕೊಳ್ಳಲು ಸಂತ್ರಾ ಕುಟುಂಬಕ್ಕೆ ಮಾಹಿತಿ ನಿಡಲಾಗಿದೆ. ವಿದ್ಯಾರ್ಥಿನಿ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ತನಿಖೆ ಮುಂದುವರೆದಿದೆ