ತಿರುವನಂತಪುರ: ಕೇರಳ ಸರ್ಕಾರವು 27 ರೈತರ ಗುಂಪನ್ನು ಇಸ್ರೇಲ್‌ಗೆ ಕಳುಹಿಸಿದೆ. ದೇಶದಲ್ಲಿ ನಡೆಯುತ್ತಿರುವ ಆಧುನಿಕ ಕೃಷಿ ವಿಧಾನಗಳನ್ನು ಕಲಿಯಲು ಇಸ್ರೇಲ್‌ಗೆ ಕಳುಹಿಸಿದೆ. ಆದರೆ ಹೀಗೆ ಹೋಗಿರುವ ರೈತರೊಬ್ಬರು ಉಳಿದುಕೊಂಡಿದ್ದ ಹೊಟೇಲ್‌ನಿಂದ ನಾಪತ್ತೆಯಾಗಿದ್ದು, ಎಲ್ಲೆಡೆ ಆತಂಕ ಎದುರಾಗಿದೆ.
ಕಣ್ಣೂರು ಜಿಲ್ಲೆಯ ಇರಿಟ್ಟಿ ಮೂಲದ ಜಾರ್ಜ್ ಕುರಿಯನ್ (48) ಕೊನೆಯದಾಗಿ ಇಸ್ರೇಲ್‌ನ ಹರ್ಜ್ಲಿಯಾ ನಗರದ ಹೋಟೆಲ್‌ನಲ್ಲಿ ಕಾಣಿಸಿಕೊಂಡಿದ್ದರು. ಕಳೆದ ಶುಕ್ರವಾರ ರಾತ್ರಿ ಊಟಕ್ಕೆ ಹೊರಡಲು ಗುಂಪು ಸೇರಿದಾಗ ಕುರಿಯನ್ ಬರಲಿಲ್ಲ. ಹಲವು ಸುತ್ತಿನ ಹುಡುಕಾಟದ ನಂತರ ವ್ಯಕ್ತಿ ಹೋಟೆಲ್‌ನಿಂದ ನಾಪತ್ತೆಯಾಗಿರುವುದು ದೃಢಪಟ್ಟಿದೆ.
ಆತ ಕೊನೆಯದಾಗಿ ಪಾಸ್‌ಪೋರ್ಟ್ ಹೊಂದಿರುವ ಕ್ಯಾರಿ ಬ್ಯಾಗ್‌ನೊಂದಿಗೆ ಕಾಣಿಸಿಕೊಂಡಿದ್ದಾರೆ ಎಂದು ಗುಂಪಿನ ಕೆಲವು ಸದಸ್ಯರು ಸ್ಥಳೀಯ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಶೀಘ್ರದಲ್ಲೇ, ರಾಯಭಾರ ಕಚೇರಿಗೆ ಎಚ್ಚರಿಕೆ ನೀಡಲಾಗಿದ್ದು, ಪೊಲೀಸ್ ತನಿಖೆಯನ್ನು ಪ್ರಾರಂಭಿಸಲಾಗಿದೆ.
ಪ್ರದೇಶದ ಸಿಸಿ ಟಿವಿಗಳನ್ನು ಪರಿಶೀಲಿಸಿದರೂ ಪ್ರಯೋಜನವಾಗಲಿಲ್ಲ. ಇದೇ ವೇಳೆ ಕುರಿಯನ್ ಪತ್ನಿಯನ್ನು ಸಂಪರ್ಕಿಸಿ ತಾನು ಚೆನ್ನಾಗಿದ್ದೇನೆ ಎಂದು ಹೇಳಿರುವುದಾಗಿ ಕೇರಳ ಮೂಲದ ಕೆಲ ಮಾಧ್ಯಮಗಳು ವರದಿ ಮಾಡಿವೆ. ತನ್ನನ್ನು ಹುಡುಕಬೇಡ ಎಂದು ಹೇಳಿದ ನಂತರ ರೈತ ಕರೆ ಕಟ್ ಮಾಡಿದ್ದಾನೆ. ನಂತರ ಆತ ಕುಟುಂಬವನ್ನು ಸಂಪರ್ಕಿಸಲಿಲ್ಲ ಎನ್ನಲಾಗಿದೆ. ಸದ್ಯ ತನಿಖೆ ನಡೆಯುತ್ತಿದೆ. ವೀಸಾ ಮೇ 8 ರಂದು ಮುಕ್ತಾಯಗೊಳ್ಳಲಿದೆ ಎನ್ನಲಾಗಿದೆ.