
ಕೇರಳ ರಾಜ್ಯಸಭಾ ಚುನಾವಣಾ ಫಲಿತಾಂಶ ಪ್ರಕಟವಾಗಿದ್ದು, ಎಲ್.ಡಿ.ಎಫ್. ಎರಡು ಸ್ಥಾನ, ಯುಡಿಎಫ್ ಒಂದು ಸ್ಥಾನ ಪಡೆದುಕೊಂಡಿದೆ.
ಎಲ್.ಡಿ.ಎಫ್. ಅಭ್ಯರ್ಥಿಗಳಾದ ಸಿಪಿಐನ ಪಿ. ಸಂತೋಷ್ ಕುಮಾರ್ ಮತ್ತು ಸಿಪಿಐಎಂನ ಎ.ಎ. ರಹೀಮ್ ಅವರು ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಜೆ.ಬಿ. ಮಾಥರ್ ಕೂಡ ಗೆಲುವು ಸಾಧಿಸಿದ್ದಾರೆ.
ನಾಗಾಲ್ಯಾಂಡ್ ನಲ್ಲಿ ಬಿಜೆಪಿ ಅಭ್ಯರ್ಥಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಬಿಜೆಪಿ ಈಗಾಗಲೇ ನಾಗಾಲ್ಯಾಂಡ್‌ನಿಂದ ಏಕೈಕ ರಾಜ್ಯಸಭಾ ಸ್ಥಾನವನ್ನು ಅವಿರೋಧವಾಗಿ ಗೆದ್ದಿದೆ. ಬಿಜೆಪಿ ನಾಯಕಿ ಎಸ್. ಫಾಂಗ್ನಾನ್ ಕೊನ್ಯಾಕ್ ಈ ಸ್ಥಾನವನ್ನು ಗೆದ್ದು ರಾಜ್ಯದಿಂದ ಮೇಲ್ಮನೆ ಪ್ರವೇಶಿಸಿದ ಮೊದಲ ಮಹಿಳೆಯಾಗಿದ್ದಾರೆ.