ತಿರುವನಂತಪುರಂ: ಒಂದು ಕೊಲೆ ರಹಸ್ಯವನ್ನು ಬಗೆಹರಿಸುವ ನಿಟ್ಟಿನಲ್ಲಿ ಕೇರಳ ಪೊಲೀಸರು ವಿನೂತನ ಪ್ರಯೋಗಕ್ಕೆ ಕೈ ಹಾಕಿದ್ದಾರೆ. ನೈಜ ಹಾವನ್ನು ಬಿಡುವ ಮುಖಾಂತರ ಅಪರಾಧ ಸ್ಥಳವನ್ನು ಪೊಲೀಸರು ಪುನರ್ ನಿರ್ಮಿಸಿದ್ದಾರೆ. ಪೊಲೀಸರು ಬಿಡುಗಡೆ ಮಾಡಿರುವ ಈ ವಿಡಿಯೋ ಭಾರಿ ವೈರಲ್ ಆಗಿದೆ.
ಕಳೆದ ವರ್ಷ ಕೊಲ್ಲಂ ಮೂಲದ 25 ವರ್ಷದ ಉತ್ರಾ ಎಂಬ ಮಹಿಳೆಗೆ ಎರಡು ಬಾರಿ ನಾಗರಹಾವು ಕಚ್ಚಿತ್ತು. ಈಕೆ ತನ್ನ ಹೆತ್ತವರ ಮನೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾಗ ಮತ್ತೊಮ್ಮೆ ನಾಗರಹಾವಿನ ಕಡಿತಕ್ಕೊಳಗಾಗಿ ಮೃತಪ್ಟಟ್ಟಿದ್ದಳು. ಬೇಕಂತಲೇ ಈಕೆಯ ಪತಿ ನಾಗರಹಾವನ್ನು ಬಿಟ್ಟು ಕೊಲೆ ಮಾಡಿರಬಹುದು ಎಂಬ ಅನುಮಾನಕ್ಕೆ ಕಾರಣವಾಗಿತ್ತು.
ಬೆಂಗಳೂರು ಮೂಲದ ಯುವ ಚಿತ್ರ ಕಲಾವಿದನ ಪ್ರತಿಭೆಗೆ ಪ್ರಧಾನಿ ಮೋದಿ ಪ್ರಶಂಸೆ
ಹೀಗಾಗಿ ಹಾವಿನ ಕಡಿತವು ಕೊಲೆ ಪ್ರೇರಿತವೋ, ಇಲ್ಲ ನೈಸರ್ಗಿಕವೋ ಎಂಬ ಪರೀಕ್ಷೆಗೆ ಮುಂದಾದ ಪೊಲೀಸರು, ನೈಜ ನಾಗರಹಾವನ್ನು ಕೋಣೆಯೊಳಗೆ ಬಿಟ್ಟಿದ್ದಾರೆ. ಜೊತೆಗೆ ಕೋಣೆಯಲ್ಲಿ ಮನುಷ್ಯನ ರೀತಿಯ ಪ್ಲಾಸ್ಟಿಕ್ ಗೊಂಬೆ ಇರಿಸಿ ಅದರ ಕೈಯಲ್ಲಿ ಚಿಕ್ಕ ಕೋಳಿ ತುಂಡನ್ನು ಕಟ್ಟಿದ್ದಾರೆ. ಆದರೆ ಹಾವು ಆ ಡಮ್ಮಿಯನ್ನು ಕಚ್ಚದೆ ಕೋಣೆಯ ಮೂಲೆಯಲ್ಲಿ ಹಾವು ಚಲಿಸಿದೆ. ನಂತರ ಹಾವು, ನಿರ್ವಾಹಕ ಕೋಳಿ ತುಂಡು ಕಟ್ಟಿದ್ದ ಪ್ಲಾಸ್ಟಿಕ್ ಕೈಯನ್ನು ಕಚ್ಚುವಂತೆ ಅದರ ಮುಂದೆ ಹಿಡಿದಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.
ಕಳೆದ ವರ್ಷದ ಜುಲೈನಲ್ಲಿ ನಡೆಸಲಾದ ಪ್ರಯೋಗದ ತುಣಕನ್ನು ದಾಖಲೆಗಳೊಂದಿಗೆ ಈ ತಿಂಗಳಾರಂಭದಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. “ಹಾವು ಮಾಂಸದ ಮೇಲೆ ಕಚ್ಚುವಂತೆ ಮಾಡಲಾಯಿತು. ಹಾಗೂ ಗಾಯದ ಆಳವನ್ನು ನಿರ್ಧರಿಸಲಾಯಿತು. ನೈಸರ್ಗಿಕ ಹಾವು ಕಡಿತದಿಂದ ಉಂಟಾದ ಗಾಯ ಹಾಗೂ ಹಾವು ಕಚ್ಚಿದಾಗ ಉಂಟಾದ ಗಾಯದ ನಡುವಿನ ವ್ಯತ್ಯಾಸವನ್ನು ಈ ಪ್ರಕ್ರಿಯೆಯ ಮೂಲಕ ಅರ್ಥಮಾಡಿಕೊಳ್ಳಬಹುದು” ಎಂದು ವರದಿ ವಿವರಿಸಿದೆ.
https://www.youtube.com/watch?v=osoKs7deTzQ&feature=youtu.be