ಆಲಪ್ಪುಳ: ಮಾದಕ ದ್ರವ್ಯ ಹೊಂದಿದ್ದ ಆರೋಪದ ಮೇಲೆ ಶಾಸಕಿಯ ಪುತ್ರ ಸೇರಿ 9 ಜನರನ್ನು ಅಬಕಾರಿ ಇಲಾಖೆಯ ಅಧಿಕಾರಿಗಳು ಬಂಧಿಸಿದ್ದಾರೆ.
ಶನಿವಾರ ತನ್ನ ಮಗನನ್ನು ಗಾಂಜಾ ಸಮೇತ ಬಂಧಿಸಲಾಗಿದೆ ಎಂಬ ವರದಿಗಳನ್ನು ಕೇರಳ ಶಾಸಕಿ ಯು. ಪ್ರತಿಭಾ ನಿರಾಕರಿಸಿದ್ದಾರೆ.
ಕಾಯಂಕುಲಂ ಎಂಎಲ್‌ಎ ಪ್ರತಿಭಾ, ತನ್ನ ಮಗ ಸ್ನೇಹಿತರೊಂದಿಗೆ ಕುಳಿತಾಗ ಮಾತ್ರ ಪ್ರಶ್ನಿಸಲಾಗಿದೆ. ಸುದ್ದಿ ತಿಳಿದಾಗಿನಿಂದ ನನಗೆ ಅನೇಕ ಫೋನ್ ಕರೆಗಳು ಬರುತ್ತಿವೆ. ಸುದ್ದಿ ನಿಜವಾಗಿದ್ದರೆ ನಾನು ಕ್ಷಮೆಯಾಚಿಸುತ್ತೇನೆ, ಇಲ್ಲದಿದ್ದರೆ ಮಾಧ್ಯಮಗಳು ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು ಎಂದು ಹೇಳಿದ್ದಾರೆ. ಗಾಂಜಾ ಪ್ರಕರಣದಲ್ಲಿ ಪುತ್ರನ ಬಂಧನವನ್ನು ಅವರು ನಿರಾಕರಿಸಿದ್ದಾರೆ.
ಸಿಪಿಎಂ ಶಾಸಕರಾದ ಯು. ಪ್ರತಿಭಾ ಅವರ ಪುತ್ರ ಸೇರಿದಂತೆ 9 ಮಂದಿಯನ್ನು ಅಲಪ್ಪುಳ ಜಿಲ್ಲೆಯ ಕುಟ್ಟನಾಡ್‌ನ ತಕಝಿಯಿಂದ ಗಾಂಜಾ ಸಮೇತ ಬಂಧಿಸಲಾಗಿದೆ ಎಂದು ಅಬಕಾರಿ ಇಲಾಖೆ ತಿಳಿಸಿದೆ.
ನಾವು ಥಕಜಿ ಸೇತುವೆಯ ಕೆಳಗೆ ಗುಂಪಿನ ಸದಸ್ಯರಿಂದ ಗಾಂಜಾವನ್ನು ವಶಪಡಿಸಿಕೊಂಡಿದ್ದೇವೆ. ಅದು ಕಡಿಮೆ ಪ್ರಮಾಣದಲ್ಲಿರುವುದರಿಂದ ಎಲ್ಲರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವುದಾಗಿ ಅಬಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.