ತಿರುವನಂತಪುರಂ: ಕೇರಳದ ಮುಸ್ಲೀಂ ಲೀಗ್ ನ ಹಿರಿಯ ಶಾಸಕ, ಮಾಜಿ ಸಚಿವ ಎಂ.ಕೆ. ಮುನೀರ್ ಅವರಿಗೆ ಅನಾಮಧೇಯ ಬೆದರಿಕೆ ಪತ್ರ ಬಂದಿದೆ.
ಅಘ್ಘಾನಿಸ್ತಾನದಲ್ಲಿ ತಾಲಿಬಾನ್ ಕ್ರೌರ್ಯವನ್ನು ಖಂಡಿಸಿ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದಕ್ಕೆ ಕೊಲೆ ಬೆದರಿಕೆ ಒಡ್ಡಲಾಗಿದೆ.
ಎಂ.ಕೆ. ಮುನೀರ್ ಅವರು ಈ ಕೂಡಲೇ ಶಾಸಕ ಸ್ಥಾನದಿಂದ ಕೆಳಗಿಳಿಯಬೇಕು, ಇಲ್ಲದಿದ್ದಲ್ಲಿ ಪಿಎಫ್ಐ ಕಾರ್ಯಕರ್ತರಿಂದ ಶಿಕ್ಷಕ ಜೋಸೆಫ್ ಅವರ ಅಂಗೈ ಕತ್ತರಿಸಿದಂತೆ ನಿಮಗೂ ಆ ಗತಿ ಎದುರಾಗಲಿದೆ ಎಂದು ಬೆದರಿಸಲಾಗಿದೆ. ಪತ್ರವನ್ನು ತಿರುವನಂತಪುರಂನ ಸರ್ಕಾರಿ ವೈದ್ಯಕೀಯ ಕಾಲೇಜು ಪ್ರದೇಶದಿಂದ ಪೋಸ್ಟ್ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಹೆಣ್ಣುಮಕ್ಕಳದ್ದೇ ತಪ್ಪು ಎನ್ನುವವರಿಗೆ ರಮ್ಯಾ ತಿರುಗೇಟು; ಇಂಥ ಅಸಂಬದ್ಧಗಳು ಕೊನೆಯಾಗಬೇಕು ಎಂದ ಸ್ಯಾಂಡಲ್ ವುಡ್ ನಟಿ
ಅದಾಗ್ಯೂ, ತಾಲಿಬಾನ್ ವಿರುದ್ಧದ ತಮ್ಮ ನಿಲುವಿಗೆ ಬದ್ಧರಾಗಿರುವುದಾಗಿ ಮುನೀರ್ ಹೇಳಿದ್ದಾರೆ. ಮುನೀರ್ ಅವರ ಫೇಸ್ ಬುಕ್ ಪೋಸ್ಟ್ ನಲ್ಲಿ, “ತಾಲಿಬಾನ್ ಉಗ್ರ ಮೂಲಭೂತವಾದ ಹಾಗೂ ಮಾನವ ಹಕ್ಕುಗಳನ್ನು ಗೌರವಿಸದ ತಾರತಮ್ಯದ ಪ್ರತಿಗಾಮಿ ರಾಜಕೀಯ ಸಿದ್ಧಾಂತವನ್ನು ಹೊಂದಿದೆ. ಜಾತಿ, ಧರ್ಮದ ಹೆಸರನ್ನು ಮುಂದಿಟ್ಟುಕೊಂಡು ಮಾಡುತ್ತಿರುವ ಇಂತಹ ಮಾನವ ವಿರೋಧಿ ಹಾಗೂ ಮಹಿಳಾ ವಿರೋಧಿ ರಾಜಕೀಯ ಸಿದ್ಧಾಂತಗಳು ತುಂಬಾ ಅಪಾಯಕಾರಿ. ಇದು ಜನರ ಮುಕ್ತ ಜೀವನಕ್ಕೆ ಅಡ್ಡಿಯಾಗಿದೆ. ನಂಬಿಕೆಯ ಯಾವುದೇ ಹಂತದಲ್ಲಿ ತಾಲಿಬಾನ್ ಅಮಾನವೀಯವಾಗಿದೆ ಹಾಗೂ ಅದನ್ನು ವಿರೋಧಿಸಬೇಕಾಗಿದೆ” ಎಂದು ಬರೆದಿದ್ದರು.