ಕೇರಳದ ಕೊಲ್ಲಂನಲ್ಲಿ 25 ವರ್ಷದ ಪತ್ನಿಯ ಮೇಲೆ ಆಕೆಯ ಪತಿಯೇ ನಾಗರಹಾವನ್ನು ಬಿಟ್ಟು ಸಾಯಿಸಿದ ಘಟನೆ ಕೋರ್ಟ್ ವಿಚಾರಣೆ ಮೂಲಕ ಬೆಳಕಿಗೆ ಬಂದಿದೆ. ಕೆಲ ತಿಂಗಳ ಮುನ್ನ ಪತ್ನಿಗೆ ವಿಷಕಾರಿಯಲ್ಲದ ಹಾವು ಕಡಿದಿತ್ತು, ಆಕೆಯು ಕೆಲವು ಔಷಧೋಪಚಾರ ಮಾಡಿಕೊಳ್ಳುತ್ತಿದ್ದಳು. ಇದನ್ನೇ ನೆಪ ಮಾಡಿಕೊಂಡ ಪತಿ ಸೂರಜ್, ಆಕೆಯ ಔಷಧದಲ್ಲಿ ನಿದ್ರೆ ಮಾತ್ರೆ ಬೆರೆಸಿದ್ದಾನೆ. ಗಾಢವಾದ ನಿದ್ರೆಯಲ್ಲಿದ್ದ ಪತ್ನಿಗೆ ವಿಷಕಾರಿ ನಾಗರಹಾವನ್ನು ತಂದು ಕಚ್ಚಿಸಿದ್ದಾನೆ.
ಮಹಾಮಳೆಯಿಂದ ತತ್ತರಿಸಿದ ಜನತೆಗೆ ಶಾಕಿಂಗ್ ನ್ಯೂಸ್: ಇನ್ನೂ 4 ದಿನ ಭಾರಿ ಮಳೆ
ಬಳಿಕ ನೈಸರ್ಗಿಕವಾಗಿ ಹಾವು ಕಚ್ಚಿ ಪತ್ನಿ ಸತ್ತಿದ್ದಾಳೆ ಎಂದು ಕೂಗಿಕೊಂಡು ಕುಟುಂಬಸ್ಥರ ಅನುಕಂಪ ಗಿಟ್ಟಿಸಿಕೊಂಡಿದ್ದಾನೆ. ಆದರೆ , ಪೊಲೀಸರ ತನಿಖೆ ವೇಳೆ ಹಾವು ಕಚ್ಚಿರುವ ಜಾಗದಲ್ಲಿನ ಗುರುತು 2.3-2.8 ಸೆ.ಮೀ ಅಗಲವಿರುವುದು ಅನುಮಾನಕ್ಕೆ ಕಾರಣವಾಗಿದೆ.
ಆಗ ವಿಶೇಷ ತನಿಖಾ ತಂಡ ಹರಿಶಂಕರ್ ಅವರು, ವೈಜ್ಞಾನಿಕ ಆಧಾರಗಳನ್ನು ಕಲೆಹಾಕಲು ಮುಂದಾಗಿದ್ದಾರೆ. ಮರಣೋತ್ತರ ಪರೀಕ್ಷೆಯ ತಜ್ಞರಿಗೆ ತಮ್ಮ ಅನುಮಾನಗಳ ಬಗ್ಗೆ ಹರಿಶಂಕರ್ ವಿವರಿಸಿದ್ದಾರೆ.
BIG BREAKING: ಭಾರತದ ಸರ್ಜಿಕಲ್ ಸ್ಟ್ರೈಕ್ ನಿಂದ ಭಾರಿ ಹಾನಿ, ಕೊನೆಗೂ ಸತ್ಯ ಒಪ್ಪಿಕೊಂಡ ಪಾಕ್ ಪ್ರಧಾನಿ
ಆಗ ಕೂಲಂಕುಷ ತಪಾಸಣೆ ನಡೆಸಲಾಗಿದೆ. ಪತ್ನಿಯ ಹೊಟ್ಟೆಯಲ್ಲಿ ನಿದ್ರೆ ಮಾತ್ರೆಯ ಅವಶೇಷಗಳು ಸಿಕ್ಕಿವೆ. ಜತೆಗೆ ನೈಸರ್ಗಿಕವಾಗಿ ಹಾವು ಕಚ್ಚಿದರೆ ಕೇವಲ 1.7-1.8 ಸೆ.ಮೀ ಮಾತ್ರವೇ ಅಗಲವಾದ ಗಾಯ ಇರುತ್ತದೆ ಎಂದು ತಜ್ಞರು ಪೊಲೀಸರಿಗೆ ವಿವರಿಸಿದ್ದಾರೆ. ಇದರಿಂದ ಪೊಲೀಸರ ಅನುಮಾನ ದೃಢವಾಗಿದೆ.
ಅಪಘಾತಕ್ಕೆ ಕಾರಣವಾಗುತ್ತೆ ರಸ್ತೆಯಲ್ಲಿ ನೀವು ಮಾಡುವ ಈ ತಪ್ಪುಗಳು
ಸೂರಜ್‌ನನ್ನು ವಶಕ್ಕೆ ಪಡೆದು ಬೆಂಡೆತ್ತಿದಾಗ ನಿಜ ಬಯಲಾಗಿದೆ. ಇದೊಂದು ಬಹಳ ಯೋಚನೆ ಮಾಡಿ, ಸಂಚು ರೂಪಿಸಿ ನಡೆಸಿದ ಕೊಲೆ ಎಂದು ಪೊಲೀಸರು ಕೋರ್ಟ್‌ಗೆ ಆಧಾರ ಸಮೇತ ತಿಳಿಸಿದ್ದಾರೆ. ವರದಕ್ಷಿಣೆ ಕಿರುಕುಳ ನೀಡುತ್ತಿದ್ದ ಸೂರಜ್, ಹೆಚ್ಚಿನ ಹಣ ನೀಡುವ ಮತ್ತೊಂದು ಕುಟುಂಬದ ಯುವತಿಯನ್ನು ವರಿಸಲು ಸಿದ್ಧತೆ ನಡೆಸಿದ್ದ ಎನ್ನುವುದು ಕೂಡ ತನಿಖೆಯಲ್ಲಿ ತಿಳಿದುಬಂದಿದೆ.