ತಿರುವನಂತಪುರಂ: ಅತ್ಯಾಚಾರ ಪ್ರಕರಣದಲ್ಲಿ ಕೇರಳ ವ್ಯಕ್ತಿಗೆ 142 ವರ್ಷ ಜೈಲು ಶಿಕ್ಷೆ ನೀಡಲಾಗಿದೆ. 10 ವರ್ಷದ ಬಾಲಕಿಗೆ ಎರಡು ವರ್ಷಗಳ ಕಾಲ ಲೈಂಗಿಕ ಕಿರುಕುಳ ನೀಡಿದ 41 ವರ್ಷದ ವ್ಯಕ್ತಿಗೆ ಕೇರಳದ ಪಟ್ಟನಂತಿಟ್ಟ ಪೋಕ್ಸೋ ನ್ಯಾಯಾಲಯ 142 ವರ್ಷ ಕಠಿಣ ಜೈಲು ಶಿಕ್ಷೆ ಮತ್ತು 5 ಲಕ್ಷ ರೂಪಾಯಿ ದಂಡ ವಿಧಿಸಿದೆ.
ಆರೋಪಿ ಆನಂದನ್ ಅಲಿಯಾಸ್ ಬಾಬು ಬಾಲಕಿಯ ಸಂಬಂಧಿಯಾಗಿದ್ದು, ಆಕೆಯ ಪೋಷಕರೊಂದಿಗೆ ವಾಸವಾಗಿದ್ದ. 2019 ರಿಂದ 21ರ ನಡುವೆ ಬಾಲಕಿ ಮೇಲೆ ಅಮಾನುಷವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದ. ತಿರುವಲ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿಚಾರಣೆ ನಡೆಸಿದ ಪೋಕ್ಸೋ ನ್ಯಾಯಾಲಯ 142 ವರ್ಷ ಜೈಲು ಶಿಕ್ಷೆ ಮತ್ತು 5 ಲಕ್ಷ ರೂ. ದಂಡ ವಿಧಿಸಿದ್ದು, ದಂಡ ಪಾವತಿಸದಿದ್ದರೆ ಇನ್ನೂ ಮೂರು ವರ್ಷ ಕಾಲ ಹೆಚ್ಚುವರಿ ಜೈಲು ಶಿಕ್ಷೆ ವಿಧಿಸಲಾಗಿದೆ.