ಅಮೆಜ಼ಾನ್ ಮೂಲಕ ಆಪಲ್ ಐಫೋನ್ 12ಅನ್ನು ಆರ್ಡರ್ ಮಾಡಿದ ವ್ಯಕ್ತಿಯೊಬ್ಬರಿಗೆ ಬಂದ ಪಾರ್ಸೆಲ್‌ನಲ್ಲಿ 5ರೂ. ಬೆಲೆಯ ಡಿಶ್‌ವಾಶಿಂಗ್ ಸೋಪು ಹಾಗೂ 5ರೂ. ನಾಣ್ಯ ಬಂದ ಘಟನೆ ಕೇರಳದ ಅಳುವಾದಲ್ಲಿ ಘಟಿಸಿದೆ.
ನೂರುಲ್ ಅಮೀನ್ ಹೆಸರಿನ ಈ ಗ್ರಾಹಕ ಅಕ್ಟೋಬರ್ 12ರಂದು 70,900ರೂ. ತೆತ್ತು ಐಫೋನ್ 12ಅನ್ನು ಖರೀದಿ ಮಾಡಿದ್ದರು. ಪಾರ್ಸೆಲ್‌ನಲ್ಲಿ ಡಿಶ್‌ವಾಶ್ ಬಾರ್ ಹಾಗೂ 5ರೂ ನಾಣ್ಯ ಬರುತ್ತಲೇ ಪೊಲೀಸ್ ಠಾಣೆಯಲ್ಲಿ ದೂರು ಕೊಟ್ಟಿದ್ದಾರೆ ಅಮೀನ್. ತನಿಖೆ ನಡೆಸಿದ ಪೊಲೀಸರಿಗೆ ಅಮೀನ್ ಆರ್ಡರ್ ಮಾಡಿದ್ದ ಫೋನ್‌ಅನ್ನು ಜಾರ್ಖಂಡ್‌ನಲ್ಲಿ ಬೇರೊಬ್ಬರು ಸ್ವೀಕರಿಸಿದ್ದಾಗಿ ತಿಳಿದುಬಂದಿದೆ.
ಬಾಲಕನಿಗೆ ಸಿಕ್ತು 100 ವರ್ಷಗಳ ಹಿಂದಿನ ಹಳೆ ಲವ್ ಲೆಟರ್…!
ಅಮೇಜ಼ಾನ್ ಕಾರ್ಡ್‌ನೊಂದಿಗೆ ಅಕ್ಟೋಬರ್ 12ರಂದು ಆರ್ಡರ್ ಮುಂದಿಟ್ಟ ಅಮೀನ್‌ಗೆ ಅಕ್ಟೋಬರ್ 15ರಂದು ಪ್ಯಾಕೇಜ್ ತಲುಪಿದೆ. ಪ್ಯಾಕೇಜ್‌ನ ಅನ್‌ಬಾಕ್ಸಿಂಗ್ ವಿಡಿಯೋವನ್ನೂ ಮಾಡಿದ ಅಮೀನ್‌ಗೆ ಅದರೊಳಗಿದ್ದ ಸರಕನ್ನು ನೋಡಿ ಶಾಕ್ ಆಗಿದೆ.
ಅಮೆಜ಼ಾನ್ ಮೂಲಕ ತೆಲಂಗಾಣ ಮೂಲಕ ಮಾರಾಟಗಾರನನ್ನು ಸಂಪರ್ಕಿಸಿದ ಪೊಲೀಸ್ ಅಧಿಕಾರಿಯೊಬ್ಬರಿಗೆ, ಅಕ್ಟೋಬರ್‌ನಲ್ಲಿ ಆರ್ಡರ್ ಮುಂದಿಟ್ಟರೂ ಸಹ ಆ ಫೋನ್ ಸೆಪ್ಟೆಂಬರ್‌ನಿಂದಲೇ ಬಳಕೆಯಲ್ಲಿದ್ದ ವಿಷಯ ತಿಳಿದು ಬಂದಿದೆ. ಫೋನ್ ಸ್ಟಾಕ್‌ನಲ್ಲಿ ಇಲ್ಲದಿದ್ದು, ಸಂಪೂರ್ಣ ಹಣವನ್ನು ಗ್ರಾಹಕನಿಗೆ ಮರುಪಾವತಿ ಮಾಡುವುದಾಗಿ ಮಾರಾಟಗಾರ ಒಪ್ಪಿಕೊಂಡಿದ್ದಾನೆ.